ಲಿಂಗಯ್ಯ-ಚನ್ನಯ್ಯ ಕಂಡಾಯಗಳ ಮೆರವಣಿಗೆ

3 mlv 4 (1)
ಮಳವಳ್ಳಿ ತಾಲೂಕಿನ ಅಣ್ಣೆ ಕೊಪ್ಪಲು ಗ್ರಾಮದಲ್ಲಿ ಕುರುಬನ ಕಟ್ಟೆ ಕ್ಷೇತ್ರ ಲಿಂಗಯ್ಯ-ಚನ್ನಯ್ಯ ಕಂಡಾಯಗಳ ಉತ್ಸವದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸಿದರು.
Published on

ಮಳವಳ್ಳಿ: ತಾಲೂಕಿನ ಅಣ್ಣೆಕೊಪ್ಪಲು ಗ್ರಾಮದಲ್ಲಿ ಕುರುಬನ ಕಟ್ಟೆ ಕ್ಷೇತ್ರ ಲಿಂಗಯ್ಯ-ಚನ್ನಯ್ಯ ಕಂಡಾಯಗಳ ಉತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ಜರುಗಿತು.

ಗ್ರಾಮದ ಮುಖಂಡರು ಕುರುಬನಕಟ್ಟೆ ಕ್ಷೇತ್ರದಿಂದ ತರಿಸಲಾಗಿದ್ದ ಕಂಡಾಯಗಳನ್ನು ಹೊರವಲಯದಲ್ಲಿ ಸ್ವಾಗತಿಸಿದರು. ನಂತರ ಕಂಡಾಯವನ್ನು ಶುಚಿಗೊಳಿಸಿ ಹೂ ಹೊಂಬಾಳೆಯನ್ನು ಅಲಂಕರಿಸಲಾಯಿತು. ವಿಧಿ ವಿಧಾನಗಳ ಪೂಜೆ ನೆರವೇರಿಸುತ್ತಿದ್ದಂತೆ, ಗ್ರಾಮದ ಯಜಮಾನರುಗಳ ತಂಡ ಧೂಪದಾರತಿ ಹಾಗೂ ಪಂಜಿನ ಸೇವೆ ನೆರವೇರಿಸಿದರು. ಕಂಡಾಯ ಹೊತ್ತ ದೇವರ ಗುಡ್ಡರು ನಾಗೇಗೌಡನ ದೊಡ್ಡಿ ಗ್ರಾಮದ ಮಾರ್ಗವಾಗಿ ಮೆರವಣಿಗೆಯಲ್ಲಿ ಸಾಗಿದರು. ತಮಟೆ, ನಗಾರಿ ಕಲಾವಿದರು ನುಡಿಸುತ್ತಿದ್ದ ಶಬ್ಧಕ್ಕೆ ಯುವಕರು ಮತ್ತು ಮಹಿಳೆಯರು ಕುಣಿದು ಕುಪ್ಪಳಿಸಿದರು.

ಕಂಡಾಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಣ್ಣೇಕೊಪ್ಪಲು ಗ್ರಾಮದಲ್ಲಿರುವ ಸಿದ್ದಪ್ಪಾಜಿ ದೇವಸ್ಥಾನ ಹಿಂಭಾಗದಲ್ಲಿರುವ ಸಮುದಾಯ ಭವನದಲ್ಲಿ ಇರಿಸಲಾಯಿತು. ನಂತರ ಫಲಹಾರ ಪೂಜೆ, ಎಡೆ ಪೂಜೆ ಸಮರ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net