ಸಮುದ್ರದಲ್ಲಿ ದುಡಿಯುವ ಮೀನುಗಾರ ಯೋಧನಿದ್ದಂತೆ

Fishermens Programme in Bhatkal
Published on

ಭಟ್ಕಳ: ಮೀನುಗಾರರ ಬದುಕು ನೀರಿನ ಮೇಲಿನ ಗುಳ್ಳೆಯಂತಿದೆ. ತಮ್ಮ ಕುಟುಂಬದ ಜವಾಬ್ದಾರಿ ಹೊತ್ತು ಸಮುದ್ರದ ಆಳದಲ್ಲಿ ದುಡಿಯುವ ಮೀನುಗಾರ ನಿಜಕ್ಕೂ ಯೋಧನೇ ಸರಿ. ಇಂತಹ ಮೀನುಗಾರರು ಇಂದು ಒಗ್ಗಟ್ಟಿನಿಂದ ಕ್ಷೇಮಾಭಿವೃದ್ಧಿಗಾಗಿ ಸಂಘ ರಚಿಸಿರುವುದು ಸಂತಸದ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.

ತಾಲೂಕಿನ ಅಳ್ವೆಕೋಡಿಯಲ್ಲಿ ಕರಾವಳಿ ಮೀನುಗಾರರ ಕ್ಷೇಮಾಭಿವೃದ್ಧಿ ಸಂಘವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮೀನುಗಾರರ ಹೋರಾಟ ಪರಿಗಣಿಸಿ ಶೇ. 22 ಹಣವನ್ನು ಶೇ. 25ಕ್ಕೆ ಏರಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಜತೆಗೆ, ನಾಪತ್ತೆಯಾದ ಮೀನುಗಾರರಿಗೆ ಪರಿಹಾರವನ್ನು 10 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ನೆರವು ಒದಗಿಸಲಾಗುತ್ತಿದೆ. ಮೀನುಗಾರಿಕಾ ಬೋಟ್​ಗಳು ಹಾನಿಯಾದಲ್ಲಿ ಪರಿಹಾರ ನೀಡಲಾಗುತ್ತಿದೆ. ಮತ್ಸ್ಯ ಆಶ್ರಯ ಯೋಜನೆಯಡಿ ಬಡ ಮೀನುಗಾರರಿಗೆ ಮನೆ ನಿರ್ವಿುಸಲಾಗುತ್ತಿದೆ ಎಂದರು.

ಕಲಾಸಿಗಳ ಸಂಘಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂ. ಸಹಾಯಧನ ನೀಡುವುದಾಗಿ ಸಚಿವರು ಘೊಷಿಸಿದರು. ಜಿಲ್ಲಾ ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ, ಡಿಪ್ ಸಿ ಟ್ರಾಲ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಕರುಣಾಕರ ಸಾಲಿಯನ್, ಡಿಪ್ ಸಿ ಟ್ರಾಲ್ ಬೋಟ್ ಚಾಲಕರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ದುರ್ಗಾಪರಮೇಶ್ವರಿ ದೇವಸ್ಥಾನದ ಮೋಕ್ತಸರ ತಿಮ್ಮಪ್ಪ ಹೊನ್ನಿಮನೆ ಸೇರಿದಂತೆ ಮೀನುಗಾರ ಮುಖಂಡರು ಹಾಗೂ ಕಲಾಸಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net