

ಲಿಮಾ: ( Lightning strikes ) ಪೆರು ದೇಶದ ಸ್ಥಳೀಯ ಫುಟ್ಬಾಲ್ ಟೂರ್ನಿ ವೇಳೆ ಆಟಗಾರನೊಬ್ಬನಿಗೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಪಂದ್ಯದ ವೇಳೆ ಸಿಡಿಲು ಬಡಿದು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಅಭಿಮಾನಿಗಳು ಹಾಗೂ ಸಮುದಾಯವನ್ನು ಬೆಚ್ಚಿ ಬೀಳಿಸಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಆಟಗಾರರು ಮೈದಾನದಲ್ಲಿದ್ದಾಗ ಸಿಡಿಲು ಬಡಿದಿದ್ದು, ಜೋಸ್ ಸೇರಿ ಹಲವು ಆಟಗಾರರು ಕುಸಿದು ಬಿದ್ದಿದ್ದಾರೆ. ಗಾಯಗೊಂಡ ಆಟಗಾರರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಲು ಬಡಿದು ಆಟಗಾರರು ಕುಸಿದು ಬೀಳುವ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಫುಟ್ಬಾಲ್ ಟೂರ್ನಿ ವೇಳೆ ಮೈದಾನಕ್ಕೆ ಸಿಡಿಲು ಬಡಿದ ಕಾರಣ ಓರ್ವ ಆಟಗಾರ ಮೃತಪಟ್ಟಿದ್ದು, ಇತರ ಐವರು ತೀವ್ರ ಗಾಯಗೊಂಡ ಆಘಾತಕಾರಿ ಘಟನೆ ನಡೆದಿದೆ. ಮೃತ ಫುಟ್ಬಾಲಿಗರನ್ನು 39 ವರ್ಷದ ಜೋಸ್ ಹ್ಯುಗೊ ಡೆ ಎಂದು ಗುರುತಿಸಲಾಗಿದೆ.
ಇನ್ನು ಸ್ಥಳೀಯ ವರದಿಯ ಪ್ರಕಾರ ಗೋಲ್ ಕೀಪರ್ ಜಾನ್ ಚೊಚ್ಚಾ ಲಾಕ್ಟ ಅವರ ಪರಿಸ್ಥಿತಿ ಗಂಭೀರವಾಗಿದ್ದು, ವೈದ್ಯ ಅವಿರತ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.