ಉಗ್ರ ವೈದ್ಯನಿಗೆ ಜೀವಾವಧಿ

CCB
Published on

ಬೆಂಗಳೂರು: ದೇಶದ ಬೇರೆಬೇರೆ ಭಾಗದಲ್ಲಿ ಸಂಭವಿಸಿದ್ದ ಭಯೋತ್ಪಾದಕ ಕೃತ್ಯಗಳಿಗೆ ಸ್ಫೋಟಕ ಸಾಮಗ್ರಿ ಪೂರೈಸಿದ್ದ ಭಟ್ಕಳದ ಉಗ್ರ, ಹೋಮಿಯೋಪಥಿ ವೈದ್ಯ ಡಾ. ಸೈಯದ್ ಇಸ್ಮಾಯಿಲ್ ಅಫಾಕ್‌ಗೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇದೇ ಪ್ರಕರಣದಲ್ಲಿ ಇನ್ನಿಬ್ಬರು ಅಪರಾಧಿಗಳಾದ ಅಬ್ದುಲ್ ಸಬೂರ್ ಹಾಗೂ ಸದ್ದಾಂ ಹುಸೇನ್‌ಗೆ ತಲಾ 10 ವರ್ಷ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.

ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರ ಸಂಘಟನೆ ದೇಶದಲ್ಲಿ ಎಸಗಿದ್ದ ವಿಧ್ವಂಸಕ ಕೃತ್ಯಗಳಿಗೆ ಸ್ಫೋಟಕ ಪೂರೈಸಿರುವುದು ಎನ್‌ಐಎ ತನಿಖೆಯಲ್ಲಿ ದೃಢಪಟ್ಟಿತ್ತು. ಇತ್ತೀಚೆಗೆ ಮೂವರನ್ನೂ ಅಪರಾಧಿಗಳು ಎಂದು ೋಷಣೆ ಮಾಡಿದ್ದ ಎನ್‌ಐಎ ಕೋರ್ಟ್, ಮಂಗಳವಾರ ಶಿಕ್ಷೆಯ ಪ್ರಮಾಣ ನಿಗದಿಪಡಿಸಿ ಆದೇಶ ಹೊರಡಿಸಿದೆ.

ಏನಿದು ಪ್ರಕರಣ?

2015ರ ಜ.8ರಂದು ಪೊಲೀಸರು ಬೆಂಗಳೂರಿನ ಪುಲಿಕೇಶಿನಗರ ಮತ್ತು ಭಟ್ಕಳ ಪಟ್ಟಣದಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ ಅಕ್ ಸೇರಿ ಮೂವರು ಉಗ್ರರನ್ನು ಬಂಧಿಸಿತ್ತು. ಇದೇ ಸಂದರ್ಭದಲ್ಲಿ ಅಪಾರ ಪ್ರಮಾಣದ ಸ್ಫೋಟಕ ವಸ್ತು ಜಪ್ತಿ ಮಾಡಲಾಗಿತ್ತು. ಬಳಿಕ ನ್ಯಾಯಾಲಯಕ್ಕೆ 2 ಸಾವಿರಕ್ಕೂ ಅಧಿಕ ಪುಟಗಳ ದೋಷಾರೋಪಪಟ್ಟಿ ಸಲ್ಲಿಸಲಾಗಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ ಶಂಕರ್ ಬಿಕ್ಕಣ್ಣವರ್ ವಾದ ಮಂಡಿಸಿದ್ದರು. 9 ವರ್ಷಗಳ ಸುದೀರ್ಘ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ತೀರ್ಪು ನೀಡಿದೆ.

ಕೋಡ್‌ವರ್ಡ್ ಸುಳಿವು

2006 ರಿಂದ 2014ವರೆಗೆ ಹೈದರಾಬಾದ್ ಸ್ಫೋಟ, ಪುಣೆಯ ಜರ್ಮನ್ ಬೇಕರಿ ಸ್ಫೋಟ, ಮುಂಬೈನ ತ್ರಿವಳಿ ಸ್ಫೋಟ, ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ಬಳಿ ನಡೆದ ಸರಣಿ ಸ್ಫೋಟ ಹಾಗೂ ದೆಹಲಿಯಲ್ಲಿ ನಡೆದ ಉಗ್ರ ಕೃತ್ಯಗಳಿಗೆ ಐಎಂ ಸಂಸ್ಥಾಪಕರಾದ ಯಾಸೀನ್ ಭಟ್ಕಳ್ ಗ್ಯಾಂಗ್, ಕರ್ನಾಟಕದಿಂದಲೇ ಸ್ಫೋಟಕ ಪೂರೈಸಿತ್ತು . ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರಿಗೆ ಇಸ್ಮಾಯಿಲ್ ಅಕ್ ಸೇರಿ ಮೂವರು ಉಗ್ರರ ಸುಳಿವು ಸಿಕ್ಕಿರಲಿಲ್ಲ. ಆದರೆ, ಕೇಂದ್ರ ಮತ್ತು ರಾಜ್ಯದ ತನಿಖಾ ಸಂಸ್ಥೆಗಳಿಗೆ ಬಾಂಬ್ ಪೂರೈಕೆ ಮಾಡಿದ್ದವನು ಡಾಕ್ಟರ್ ಎಂಬ ಸುಳಿವಷ್ಟೇ ಸಿಕ್ಕಿತ್ತು. ಆದ್ರೆ ಈ ಡಾಕ್ಟರ್ ಎನ್ನುವುದು ಕಾರ್ಯಾಚರಣೆಯ ಕೋಡ್‌ವರ್ಡ್ ಇರಬಹುದೇ ಅಥವಾ ವೈದ್ಯ ಅಕ್ ಹೆಸರೋ ಎಂಬ ಅನುಮಾನ ಮೂಡಿತ್ತು.

ರಹಸ್ಯ ಬಯಲಾಗಿದ್ದೇಗೆ?

2014ರ ಡಿ.30ರಂದು ಬೆಂಗಳೂರಿನ ಚರ್ಚ್‌ಸ್ಟ್ರೀಟ್ ಹೋಟೆಲ್ ಬಳಿ ಬಾಂಬ್ ಸ್ಫೋಟಿಸಿತ್ತು. ಈ ಕೃತ್ಯದಲ್ಲಿ ಭಟ್ಕಳ ಸಹೋದರರ ನಂಟಿರುವ ಸುಳಿವು ಆಧರಿಸಿ ಅಂದಿನ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಸೂಚನೆ ಮೇರೆಗೆ ಇನ್‌ಸ್ಪೆಕ್ಟರ್ (ಈಗಿನ ಹಾಸನ ಜಿಲ್ಲಾ ಹೆಚ್ಚುವರಿ ಎಸ್‌ಪಿ) ಎಂ.ಕೆ. ತಮ್ಮಯ್ಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. 2015ರ ಜನವರಿ 8ರಂದು ಪುಲಿಕೇಶಿನಗರದಲ್ಲಿ ವೈದ್ಯ ಡಾ. ಅಕ್, ಅಬ್ದುಲ್ ಸುಬೂರ್ ಮತ್ತು ಭಟ್ಕಳದಲ್ಲಿ ಸದ್ದಾಂನನ್ನು ಬಂಧಿಸಲಾಗಿತ್ತು. ಇವರ ವಿಚಾರಣೆ ವೇಳೆ ಜ.26ರ ಗಣರಾಜ್ಯೋತ್ಸವ ಸಮಾರಂಭದ ವೇಳೆ ದೇಶದ ವಿವಿಧೆಡೆ ಬಾಂಬ್ ಸ್ಫೋಟಿಸಲು ರೂಪಿಸಿದ್ದ ಸಂಚಿನ ವಿಚಾರ ಬೆಳಕಿಗೆ ಬಂದಿತ್ತು. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರಿಂದ ಜಗತ್ತಿನ ಗಮನ ಸೆಳೆಯಲು ಈ ಸಂಚು ರೂಪಿಸಿದ್ದರು. ಅಲ್ಲದೆ ಈ ಹಿಂದೆ ದೇಶದ ಹಲವೆಡೆ ಎಂಐ ಸಂಘಟನೆ ನಡೆಸಿದ್ದ ವಿಧ್ವಂಸಕ ಕೃತ್ಯಗಳಿಗೆ ಸ್ಫೋಟಕ ವಸ್ತುಗಳನ್ನು ಪೂರೈಸಿದ್ದ ಸಂಗತಿಯನ್ನು ಬಂಧಿತರು ಬಹಿರಂಗಪಡಿಸಿದ್ದರು.

* ಎಲ್ಲೆಲ್ಲಿ ಯಾವಾಗ ಸ್ಫೋಟ?

ಜರ್ಮನ್ ಬೇಕರಿ, ಬೆಂಗ್ಳೂರು ಸ್ಫೋಟ!

- 2010ರಲ್ಲಿ ಡಾ.ಅಫಾಕ್‌, ಕುಂದಾಪುರಕ್ಕೆ ಹೋಗಿ 150 ಜಿಲೆಟಿನ್ ಕಡ್ಡಿ ಮತ್ತು 10 ಕೆಜಿ ನೈಟ್ರೇಟ್ ಖರೀದಿಸಿದ್ದ. ರಿಯಾಜ್ ಭಟ್ಕಳ್ ಸೂಚನೆ ಮೇರೆಗೆ 7 ಡಿಟೋನೇಟರ್ಸ್‌ಗಳನ್ನು ಸೇರಿಸಿ ಬಳಿಕ ಸ್ಫೋಟಕ ವಸ್ತುಗಳನ್ನು ವ್ಯಕ್ತಿಯೊಬ್ಬನಿಗೆ ಹಸ್ತಾಂತರಿಸಿದ್ದ. ಪುಣೆಯ ಜರ್ಮನ್ ಬೇಕರಿ ಮತ್ತು ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸರಣಿ ಸ್ಫೋಟ ಸಂಭವಿಸಿತ್ತು.

ಮುಂಬೈನಲ್ಲಿ ತ್ರಿವಳಿ ಸ್ಫೋಟ

- 2011ರ ಜೂನ್‌ನಲ್ಲಿ 150 ಜಿಲೆಟಿನ್ ಕಡ್ಡಿ ಅಗತ್ಯವಿತ್ತು. ಸಿದ್ದಾಪುರಕ್ಕೆ ಹೋಗಿ ತರುವಂತೆ ಡಾ.ಅಕ್‌ಗೆ ರಿಯಾಜ್ ಭಟ್ಕಳ್ ಆಜ್ಞೆ ಮಾಡಿದ್ದ. ಅದಕ್ಕೆ ಬೇಕಾದ ಹಣ ಒದಗಿಸಿದ್ದ. 20 ಸಾವಿರ ರೂ. ಪಡೆದ ಅಕ್, ಸಿದ್ದಾಪುರಕ್ಕೆ ಹೋಗಿ 150 ಜಿಲೆಟಿನ್ ಕಡ್ಡಿ, 6 ಡಿಟೋನೆಟರ್ಸ್‌, 5 ಸರ್ಕ್ಯೂಟ್ ಬೋರ್ಡ್‌ಗಳನ್ನು ಖರೀದಿಸಿ ಮಂಗಳೂರಿಗೆ ಬಂದು ಅಪರಿಚಿತ ವ್ಯಕ್ತಿಗೆ ಕೊಟ್ಟಿದ್ದ. ಇದಕ್ಕೆ 50 ಸಾವಿರ ರೂ. ಪಡೆದಿದ್ದ, ಸ್ವಲ್ಪ ದಿನಕ್ಕೆ ಮುಬೈನಲ್ಲಿ ತ್ರಿವಳಿ ಸ್ಫೋಟ ಸಂಭವಿಸಿತ್ತು.

ಪುಣೆ ಸ್ಫೋಟಕ್ಕೆ 100 ಜಿಲೆಟಿನ್ ಕಡ್ಡಿ

- 2012ರ ಜೂನ್‌ನಲ್ಲಿ 100 ಜಿಲೆಟಿನ್ ಕಡ್ಡಿ, ಐದಾರು ಸರ್ಕ್ಯೂಟ್ ಬೋರ್ಡ್, 10 ಡಿಟೋನೆಟರ್ಸ್‌ ಬೇಕೆಂದು ರಿಯಾಜ್ ಭಟ್ಕಳ್ ಚಾಟ್‌ನಲ್ಲಿ ಸೂಚಿಸಿದ್ದ. ಈ ಬಾರಿಯೂ ಸಿದ್ದಾಪುರದಲ್ಲಿ 100 ಜಿಲೆಟಿನ್ ಸ್ಟಿಕ್, ಆರೇಳು ಟೈಮರ್ಸ್‌, 12 ಡಿಟೋನೆಟರ್ಸ್‌ ಖರೀದಿಸಿ ಮಂಗಳೂರಿನ ರೈಲು ನಿಲ್ದಾಣಕ್ಕೆ ಹೋಗಿ ವ್ಯಕ್ತಿಗೆ ಡೆಲಿವರಿ ಮಾಡಿದ್ದ. ಒಂದೇ ತಿಂಗಳಿಗೆ ಪುಣೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು.

ಹೈದರಾಬಾದ್‌ನಲ್ಲೂ ಸ್ಫೋಟ

- 2013ರ ಜನವರಿಯಲ್ಲಿ ರಿಯಾಜ್ ಭಟ್ಕಳ್ ಕಡೆಯಿಂದ 50 ಸಾವಿರ ರೂ. ಹಣ ಹವಾಲಾ ಮೂಲಕ ಪಡೆದ ಅಾಕ್, ಸಿದ್ದಾಪುರದಲ್ಲಿ 100 ಜಿಲೆಟಿನ್ ಕಡ್ಡಿ, 8 ಡಿಟೋನೆಟರ್ಸ್‌, ಸರ್ಕ್ಯೂಟ್ ಬೋರ್ಡ್‌ಗಳನ್ನು ಮಂಗಳೂರಿನ ಆಸ್ಪತ್ರೆ ಬಳಿ ವ್ಯಕ್ತಿಗೆ ಹಸ್ತಾಂತರ ಮಾಡಿದ್ದ. ಇದಾದ ನಂತರ ಹೈದರಾಬಾದ್‌ನಲ್ಲಿ ಬಾಂಬ್ ಸ್ಫೋಟಗೊಂಡಿತ್ತು.

ಅಕ್ ಪಾಕಿಸ್ತಾನ ನಂಟು

* ಅಫಾಕ್‌  ಬೆಳಗಾವಿಯಲ್ಲಿ ಓದಿದ್ದ

* ಎಎಂ ಶೇಖ್ ಕಾಲೇಜಿಗೆ ಸೇರಿದ್ದ

* 1996-2002ವರೆಗೆ ಅಧ್ಯಯನ

* ಓದು ಮುಗಿಸಿ ಭಟ್ಕಳಕ್ಕೆ ವಾಪಸ್

* 2002- 2013ವರೆಗೆ ವೈದ್ಯಸೇವೆ

* ಭಟ್ಟಳ ಸಿಟಿಯಲ್ಲೇ ಕ್ಲಿನಿಕ್ ತೆಗೆದಿದ್ದ

* ಪಿಎ್ಐ, ಐಎಂ ಜತೆ ಕೈಜೋಡಿಸಿದ

* ರಿಯಾಜ್ ಭಟ್ಕಳ್ ಟೀಮ್ ಸ್ನೇಹ

* ಜಿಹಾದ್ ಭೋದನೆಯಲ್ಲಿ ತೊಡಗಿದ

* 2005ರಲ್ಲಿ ಪಾಕ್ ಯುವತಿ ವರಿಸಿದ್ದ

* 2009ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ

* ಬಾಮೈದುನ ಮದುವೆಗಾಗಿ ಪ್ರಯಾಣ

* ಬಳಿಕ ದುಬೈನಲ್ಲೂ ಉಗ್ರರ ಸಂಪರ್ಕ

* ಸಿಮಿ ರಾಷ್ಟ್ರೀಯ ಅಧ್ಯಕ್ಷನ ಭೇಟಿ

* ಅಲ್ಲಿಂದ ಶಾರ್ಜಾಗೂ ಪ್ರಯಾಣಿಸಿದ್ದ

* ಭಟ್ಕಲ್ ಸಹೋದರರ ಭೇಟಿಯಾಗಿದ್ದ

* ಕರಾಚಿಯಲ್ಲಿ ಎಕೆ 47 ತರಬೇತಿ ಪಡೆದಿದ್ದ

ನಾಲ್ವರು ನಾಪತ್ತೆ!

ಇದೇ ಪ್ರಕರಣದಲ್ಲಿ ಒಟ್ಟು 9 ಶಂಕಿತ ಉಗ್ರರಿದ್ದು, ಅದರಲ್ಲಿ ಡಾ. ಸೈಯದ್ ಇಸ್ಮಾಯಿಲ್ , ಅಬ್ದುಲ್ ಸಬೂರ್, ಸದ್ದಾಂ ಹುಸೇನ್, ರಿಯಾಜ್ ಅಹಮದ್ ಮತ್ತು ಝೈನುಲ್ ಅಭಿದೀನ್ ಸಿಕ್ಕಿಬಿದ್ದಿದ್ದರು. ಅದರಲ್ಲಿ ರಿಯಾಜ್ ಮತ್ತು ಝೈನಲ್ ಖುಲಾಸೆಯಾಗಿದ್ದು, ಉಳಿದ ಮೂವರು ಅಪರಾಧಿಗಳೆಂದು ೋಷಣೆಯಾಗಿದೆ. ಉಳಿದಂತೆ ರಿಯಾಜ್ ಭಟ್ಕಳ್, ಇಕ್ಬಾಲ್ ಶಾಬಂದ್ರಿ, ಅಫೀಸ್ ಝಲಾನಿ, ಸಮ್ಮೀರ್ ತಲೆಮರೆಸಿಕೊಂಡಿದ್ದು, ಎನ್‌ಐಎ ಶೋಧ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net