

ಬೆಂಗಳೂರು: ಪ್ರಸ್ತುತ, ಸ್ಥೂಲಕಾಯತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ಜೀವನಶೈಲಿಯ (Lifestyle) ತಪ್ಪುಗಳಿಂದ ಬೊಜ್ಜು ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ವಿಶೇಷವಾಗಿ ರಾತ್ರಿ ಊಟದ ನಂತರ ಮಾಡುವ ಕೆಲವು ತಪ್ಪುಗಳು ಬೊಜ್ಜುಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಈಗ ಊಟ ಮಾಡಿದ ನಂತರ ಮಾಡಬಾರದ ಕೆಲಸಗಳು ಯಾವುವು ಎಂದು ತಿಳಿಯೋಣ.
ಅನೇಕ ಜನರು ತಿಂದ ತಕ್ಷಣ ನೀರು ಕುಡಿಯುತ್ತಾರೆ. ಹಾಗೆಯೇ ಊಟ ಮಾಡುವಾಗ ನೀರು ಕುಡಿಯುತ್ತಾರೆ. ಆದರೆ ಹೀಗೆ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಆಹಾರ ತಿಂದ ತಕ್ಷಣ ನೀರು ಕುಡಿದರೆ ಹೊಟ್ಟೆಯಲ್ಲಿ ಜೀರ್ಣಕ್ರಿಯೆಗೆ ಉಪಯುಕ್ತವಾದ ಆಮ್ಲಗಳ ಸಾಂದ್ರತೆ ಕಡಿಮೆಯಾಗುತ್ತದೆ. ಇದರಿಂದ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದು ಬೊಜ್ಜಿಗೆ ಕಾರಣವಾಗುತ್ತದೆ.
ರಾತ್ರಿ ಊಟ ಮಾಡಿ ಮಲಗಿದರೆ ಬೊಜ್ಜು ಹೆಚ್ಚುತ್ತದೆ. ತಿಂದ ತಕ್ಷಣ ಮಲಗಿದರೆ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ.
ಬೊಜ್ಜು ಕಡಿಮೆ ಮಾಡಿಕೊಳ್ಳಲು ರಾತ್ರಿ ಊಟದ ನಂತರ ಸ್ವಲ್ಪ ಹೊತ್ತು ನಡೆಯಲೇಬೇಕು. ಊಟದ ನಂತರ ಕನಿಷ್ಠ 100 ಹೆಜ್ಜೆಗಳನ್ನು ಇಡಲು ತಜ್ಞರು ಹೇಳುತ್ತಾರೆ.
ಕೆಲವರು ಊಟ ಮಾಡಿದ ತಕ್ಷಣ ಟೀ ಅಥವಾ ಕಾಫಿ ಕುಡಿಯುತ್ತಾರೆ. ಕಾಫಿಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತವೆ. ಇದು ಹೊಟ್ಟೆಯ ಗ್ಯಾಸ್ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ದೀರ್ಘಾವಧಿಯಲ್ಲಿ ಸ್ಥೂಲಕಾಯತೆಗೆ ಕಾರಣವಾಗುತ್ತದೆ.