

ನಿರ್ದಿಷ್ಟ ಸಮಯಾವಕಾಶ ನೀಡಿದ್ದು, ಆ ಸಮಯದಲ್ಲಿ ಸಾಲ ಮರುಪಾವತಿ ಮಾಡದಿದ್ದರೆ ಸಾಲಗಾರನಿಗೆ ಇನ್ನಷ್ಟು ಸಮಯಾವಕಾಶ ನೀಡಬೇಕು. ಇಲ್ಲವೇ ಅದನ್ನು ಮನ್ನಾ ಮಾಡಿಬಿಡಬೇಕು. ಕಷ್ಟದಲ್ಲಿರುವವನಿಗೆ ಸಾಲ ನೀಡುವುದು ಪುಣ್ಯದ ಕಾರ್ಯವಾಗಿದೆ. ಇನ್ನಷ್ಟು ಕಾಲಾವಕಾಶ ನೀಡುವುದಕ್ಕೆ ಇಮ್ಮಡಿ ಪುಣ್ಯ ಲಭಿಸುವುದೆಂಬ ವಾಗ್ದಾನವಿದೆ ಎಂದು ಒಂದು ಹದೀಸ್ ಹೇಳುತ್ತದೆ.
ಸಾಲವನ್ನು ಮನ್ನಾ ಮಾಡಿಬಿಡುವುದು ಅಲ್ಲಾಹನಿಗೆ ಅತ್ಯಂತ ಪ್ರಿಯವಾದ ಕಾರ್ಯವಾಗಿದೆ. ಇದು ಅತ್ಯುತ್ತಮ ಕಾರ್ಯವಾಗಿದೆ. ಒಬ್ಬ ಸಾಲಗಾರನಿಗೆ ಅಲ್ಲಾಹನ ಸಂದೇಶವಾಹಕರು ನಿಮಗಿಂತ ಮೊದಲು ಗತಿಸಿದ ಮುಸ್ಲಿಮರ ಪೈಕಿ ಒಬ್ಬ ವ್ಯಕ್ತಿಯ ಪ್ರಾಣವನ್ನು ದೇವಚರರು ವಶಪಡಿಸಿಕೊಂಡಾಗ ಅವನನ್ನು ವಿಚಾರಿಸಿದರು, ನೀವೇನಾದರೂ ಒಳ್ಳೆಯ ಕಾರ್ಯ ಮಾಡಿದ್ದೀರೋ ? ಎಂದು. ಅವನು ಇಲ್ಲ ಎಂದನು. ಆಗ ದೇವಚರರು, ‘ಏನಾದರೂ ಒಳ್ಳೆಯ ಕಾರ್ಯ ಮಾಡಿದ್ದೀಯೋ ಎಂದು ಜ್ಞಾಪಿಸಿಕೋ’ ಎಂದರು.
ಆತ ಸ್ವಲ್ಪ ಆಲೋಚಿಸಿ ‘ಹೌದು.. ಜ್ಞಾಪಕಕ್ಕೆ ಬಂತು. ನಾನು ಭೂಲೋಕದಲ್ಲಿ ಅಗತ್ಯವಿದ್ದವರಿಗೆ ಸಾಲ ನೀಡುತ್ತಿದ್ದೆ. ಹಣವಿಲ್ಲದೆ ಸಾಲಗಾರರು ನಿರ್ದಿಷ್ಟ ಸಮಯದಲ್ಲಿ ಮರುಪಾವತಿ ಮಾಡದಿದ್ದರೆ ಅವರಿಗೆ ಇನ್ನಷ್ಟು ಕಾಲಾವಕಾಶ ನೀಡುವಂತೆಯೂ, ಮರುಪಾವತಿ ಮಾಡಿದ ಸಾಲಗಾರನೊಂದಿಗೆ ನಯವಾಗಿ ವರ್ತಿಸುವಂತೆಯೂ ಸೇವಕರಿಗೆ ಆದೇಶಿಸುತ್ತಿದ್ದೆ’ ಎಂದನು. ಆಗ ಅಲ್ಲಾಹನು. ಅವನ ತಪ್ಪುಗಳನ್ನೆಲ್ಲ ಕ್ಷಮಿಸಿ ಬಿಡಿ!. ಏಕೆಂದರೆ ಅವನು ನನ್ನ ಅಪೇಕ್ಷಿತ ದಾಸರ ಜತೆಗೆ ಕರುಣೆ ಹಾಗೂ ಔದಾರ್ಯದಿಂದ ವರ್ತಿಸುತ್ತಿದ್ದನು ಎಂದನಂತೆ. ಸಾಲ ಮರುಪಾವತಿ ಮಾಡುವ ಶಕ್ತಿಯಿದ್ದೂ ಮರುಪಾವತಿಸುವ ವಿಷಯದಲ್ಲಿ ಹಿಂದೆ ಮುಂದೆ ನೋಡುವ ಸಾಲಗಾರನಿಗೆ ಛೀಮಾರಿ ಹಾಕುವುದು ಹಾಗೂ ಶಿಕ್ಷೆ ವಿಧಿಸುವುದು ಕೂಡ ಸಮಾಜದ ಪಾಲಿಗೆ ಧರ್ಮಸಮ್ಮತವಾಗಿದೆ.