ಎಲ್​ಐಸಿಗೆ ಗಿನ್ನೆಸ್ ದಾಖಲೆ ಗರಿ

lic
Published on

ನವದೆಹಲಿ: ಒಂದೇ ದಿನದ ಅವಧಿಯಲ್ಲಿ ಅತಿ ಹೆಚ್ಚು ಜೀವ ವಿಮಾ ಪಾಲಿಸಿಗಳನ್ನು ಮಾರಾಟ ಮಾಡಿ ಗಿನ್ನೆಸ್ ದಾಖಲೆ ಸೃಷ್ಟಿಸಿರುವುದಾಗಿ ಭಾರತೀಯ ಜೀವವಿಮಾ ನಿಗಮ (ಎಲ್​ಐಸಿ) ಶನಿವಾರ ತಿಳಿಸಿದೆ. 2025ರ ಜ. 20ರಂದು ಮಾಡಿದ ಈ ಐತಿಹಾಸಿಕ ಸಾಧನೆಯನ್ನು ಗಿನ್ನೆಸ್ ಸಂಸ್ಥೆ ಪರಿಶೀಲಿಸಿ ಪುರಸ್ಕರಿಸಿದೆ ಎಂದು ಎಲ್​ಐಸಿ ಪ್ರಕಟಣೆ ತಿಳಿಸಿದೆ. ಅಂದು ಎಲ್​ಐಸಿಯ 4,52,839 ಏಜೆಂಟರು ದೇಶಾದ್ಯಂತ ಒಟ್ಟು 5,88,107 ಜೀವ ವಿಮಾ ಪಾಲಿಸಿಗಳನ್ನು ಮಾರಾಟ ಮಾಡಿದ್ದಾರೆ. ಕೇವಲ 24 ಗಂಟೆಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪಾಲಿಸಿಗಳನ್ನು ಮಾಡಿಸಿರುವುದು ಜೀವವಿಮಾ ಉದ್ಯಮದಲ್ಲೇ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಕಂಪನಿ ಹೇಳಿದೆ. ಎಲ್​ಐಸಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಿದ್ಧಾರ್ಥ ಮೊಹಾಂತಿ ಅವರು ಜ. 20ರಂದು ‘ಮ್ಯಾಡ್ ಮಿಲಿಯನ್ ಡೇ’ ಅಂಗವಾಗಿ ಪ್ರತಿಯೊಬ್ಬ ಏಜೆಂಟರೂ ಕನಿಷ್ಠ ತಲಾ ಒಬ್ಬರ ಪಾಲಿಸಿಯನ್ನಾದರೂ ಮಾಡಿಸಬೇಕು ಎಂದು ಕರೆ ನೀಡಿದ್ದರ ಫಲವಾಗಿ ಈ ದಾಖಲೆ ನಿರ್ವಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net