ಗ್ರಂಥಾಲಯ ಸದುಪಯೋಗ ಪ್ರತಿಯೊಬ್ಬರೂ ಪಡೆದುಕೊಳ್ಳಿ; ಸುಮಾ ಕೋಡಿಹಳ್ಳಿ

19-RNR-08
Published on

ಹಾವೇರಿ: ಗ್ರಂಥಾಲಯ ಜ್ಞಾನಾರ್ಜನೆಯ ಕೇಂದ್ರವಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮುಖ್ಯ ಗ್ರಂಥಾಲಯಾಧಿಕಾರಿ ಸುಮಾ ಕೋಡಿಹಳ್ಳಿ ಹೇಳಿದರು.
ಇಲ್ಲಿಯ ಮಂಜುನಾಥ ನಗರದ ಶಾಖಾ ಗ್ರಂಥಾಲಯದಲ್ಲಿ ರಾಷ್ಟೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು.
ಓದುಗರಿಗೆ ಹಾಗೂ ಶಾಲಾ ಮಕ್ಕಳಿಗೆ ಡಿಜಿಟಲ್ ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಶಾಖಾ ಪ್ರಭಾರಿ ಮಹ್ಮದನೀಫ್ ದೊಡ್ಡದೇವರ, ನಿಜಾಮುದ್ದಿನ ಕರಿಯಣ್ಣನವರ, ಶಿಕ್ಷಕರು, ಶಾಲಾ ಮಕ್ಕಳು, ಓದುಗರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net