ಗ್ರಂಥಾಲಯಗಳು ಜ್ಞಾನದ ಸಾಗರ

Libraries are oceans of knowledge
Published on

ಬಂಕಾಪುರ: ಗ್ರಂಥಾಲಯಗಳು ಜ್ಞಾನದ ಸಾಗರ. ಪುರಾಣ, ಇತಿಹಾಸ ಕಾಲದಿಂದಲೂ ಇಂದಿನ ಡಿಜಿಟಲ್ ಯುಗದವರೆಗೂ ಅನೇಕ ಪಂಡಿತರು, ಸಂಶೋಧಕರು, ಅನುಭಾವಿಗಳು ತಮ್ಮ ಶ್ರಮ, ಸಮಯ, ಜ್ಞಾನ ಉಪಯೋಗಿಸಿ ಮುಂದಿನ ಪೀಳಿಗೆಗೆ ಗ್ರಂಥಗಳನ್ನು ಬರೆದಿಟ್ಟಿದ್ದಾರೆ. ಇಂತಹ ಗ್ರಂಥಗಳ, ಜ್ಞಾನ ಸಂಗ್ರಹವೇ ಗ್ರಂಥಾಲಯ ಎಂದು ಸಾಹಿತಿ ಎ.ಕೆ. ಆದವಾನಿಮಠ ಹೇಳಿದರು.

ಪಟ್ಟಣದ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಜ್ಞಾನ ದೇಗುಲವಾಗಿರುವ ಗ್ರಂಥಾಲಯ ಶಿಥಿಲಾವಸ್ಥೆಯಿಂದ ಕೂಡಿದೆ. ಭಯದ ವಾತಾವರಣದಲ್ಲಿ ಓದುವಂತಾಗಿದೆ. ಕೂಡಲೇ ಗ್ರಂಥಾಲಯವನ್ನು ಪುರಸಭೆ ಸಭಾಭವನಕ್ಕೆ ಸ್ಥಳಾಂತರಿಸಬೇಕು. ಪಟ್ಟಣಕ್ಕೆ ವಿಶೇಷ ಅನುದಾನದಡಿ ಸಾಕಷ್ಟು ಅನುದಾನ ಬಂದಿದ್ದು, ಶಾಸಕರು ಮಂದಿರ, ಮಸೀದಿಗಳ ನಿರ್ವಣಕ್ಕೆ ನೀಡುತ್ತಿದ್ದಾರೆ. ಸ್ಥಳೀಯ ಮುಖಂಡರು ಶಾಸಕರ ಗಮನಕ್ಕೆ ತಂದು ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ನಿರ್ವಣಕ್ಕೆ ಮುಂದಾಗಬೇಕು ಎಂದರು.

ಪುರಸಭೆ ಉಪಾಧ್ಯಕ್ಷ ಆಂಜನೇಯ ಗುಡಗೇರಿ, ಮಂಜುನಾಥ ಕೂಲಿ ಮಾತನಾಡಿದರು. ಗ್ರಂಥಪಾಲಕ ಎಂ.ಎಚ್. ದೊಡ್ಡದೇವರ, ಪುರಸಭೆ ಸದಸ್ಯರಾದ ಆಯೂಭಖಾನ ಪಠಾಣ, ಸುರೇಶ ಕುರಗೋಡಿ, ರಮೇಶ ಸಿದ್ದುನವರ, ತಹಮೀದ ಖಾಜಿ, ರಾಜೇಂದ್ರ ಟೋಪಣ್ಣವರ, ಮಂಜು ತಳವಾರ, ಶಿವಪ್ಪ ಮಾಗಿ, ರಾಮಕೃಷ್ಣ ಆಲದಕಟ್ಟಿ, ನೂರಅಹ್ಮದ ಡೊರಳ್ಳಿ, ರಾಜಶೇಖರ ಬಡ್ಡಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net