

ಸೊರಬ: ಗ್ರಂಥಾಲಯಗಳು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡಿ ಶೈಕ್ಷಣಿಕ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಗ್ರಂಥಪಾಲಕ ಡಾ. ಕಿರಣ್‌ಕುಮಾರ್ ದೊಡ್ಡಮನಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್.ರಂಗನಾಥನ್ ಅವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕರು ಪ್ರತಿದಿನ ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಹಕಾರಿಯಾಗಲಿದೆ. ಆದರೆ ಮೊಬೈಲ್ ಗೀಳಿನಿಂದ ಗ್ರಂಥಾಲಯಗಳಿಗೆ ಹೋಗಿ ಓದುವರ ಸಂಖ್ಯೆ ಕಡಮೆಯಾಗಿದೆ. ಪ್ರತಿದಿನ ದಿನಪತ್ರಿಕೆಗಳು ಮತ್ತಿತರ ಪುಸ್ತಗಳನ್ನು ಓದುವುದರಿಂದ ಸಂಸ್ಕಾರ, ಸಂಸ್ಕೃತಿಯ ಪರಿಚಯ ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಪಂ ಇಒ ಕೆ.ಜಿ.ಶಶಿಧರ, ಗ್ರಂಥಾಲಯ ಜ್ಞಾನ ಪ್ರಸರಿಸುವ ಕೇಂದ್ರಗಳು. ಪ್ತುಕಗಳ ಅಧ್ಯಯನದಿಂದ ದೊರೆಯುವ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿ, ಸರ್ಕಾರ ಶಿಕ್ಷಣಕ್ಕೆ ಮಹತ್ವ ನೀಡಿದೆ. ಗ್ರಂಥಾಲಯದ ಮೂಲಕ ಶಿಕ್ಷಣ ನೀಡುತ್ತಿರುವ ಗ್ರಂಥಪಾಲಕರ ಪಾತ್ರ ದೊಡ್ಡದು ಎಂದು ತಿಳಿಸಿದರು.
ಗ್ರಂಥಪಾಲಕರಾದ ಮಂಜುನಾಥ್, ಆನಂದ್, ಲಕ್ಷ್ಮಣಪ್ಪ, ಕುಬೇರಪ್ಪ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಪಿಡಿಒಗಳ ಸಂಘದ ಅಧ್ಯಕ್ಷ ಚಿದಾನಂದ, ಉಪಾಧ್ಯಕ್ಷ ಸಂದೀಪ್, ಪ್ರಧಾನ ಮಂತ್ರಿ ಪೋಷಣ್ ಅಭಿಯಾನ ಸಹಾಯಕ ನಿರ್ದೇಶಕ ಡಾ. ಶ್ರೀಕಾಂತ್, ಗ್ರಂಥಪಾಲಕರಾದ ಬೈರಪ್ಪ, ಸಿ.ಕೆ.ಬಲೀಂದ್ರಪ್ಪ, ಮಮತಾ, ಸಂಜನಾ, ಶ್ರೀರಾಮ್, ಮಂಜಪ್ಪ ಇತರರಿದ್ದರು.