ಜಮ್ಮು-ಕಾಶ್ಮೀರ ಸರ್ಕಾರಕ್ಕೆ ಎಲ್ಲಾ ಅಧಿಕಾರ ಇದೆ ಎಂಬ ಎಲ್​ಜಿ ಹೇಳಿಕೆ ಸುಳ್ಳು; ಫಾರೂಕ್ ಅಬ್ದುಲ್ಲಾ| Farooq Abdullah

ವಿಜಯವಾಣಿ - 2025-11-01T084809.536
Published on

ಶ್ರೀನಗರ: ರಾಜ್ಯ ಸ್ಥಾನಮಾನದ ಬೇಡಿಕೆಯನ್ನು ಆಡಳಿತವನ್ನು ವಿಳಂಬಗೊಳಿಸಲು ನೆಪವಾಗಿ ಬಳಸಬಾರದು. ಸರ್ಕಾರಕ್ಕೆ ಎಲ್ಲಾ ಅಧಿಕಾರವಿದೆ ಎಂದು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿಕೆ ವಿರುದ್ಧ ಮಾಜಿ ಸಿಎಂ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ(Farooq Abdullah) ಶುಕ್ರವಾರ(ಅ. 31) ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಗವರ್ನರ್ ಸಿನ್ಹಾ ಅವರು ಸುಳ್ಳು ಹೇಳಿದ್ದಾರೆ. ಜಮ್ಮು-ಕಾಶ್ಮೀರದ ಸರ್ಕಾರಕ್ಕೆ ಇನ್ನೂ ಪೂರ್ಣ ಪ್ರಮಾಣದ ಅಧಿಕಾರವನ್ನು ನೀಡಿಲ್ಲ. ಅವರು ಒಂದೇ ಒಂದು ಕಡತವನ್ನು ಹಿಂತಿರುಗಿಸಿಲ್ಲ ಎಂದು ಆರೋಪಿಸುರುವ ಅವರು, ಈ ಬಗ್ಗೆ ನಾವು ಸರಿಯಾದ ಸಮಯದಲ್ಲಿ ಪ್ರತಿಕ್ರಿಯಿಸುತ್ತೇವೆ ಎಂದು ತೀಕ್ಷ್ಯ ಉತ್ತರ ನೀಡಿದ್ದಾರೆ.

SKICC ಯಲ್ಲಿ ನಡೆದ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಸಂಸ್ಥಾಪನಾ ದಿನದಂದು ಮಾತನಾಡಿದ್ದ ಮನೋಜ್ ಸಿನ್ಹಾ, ಜಮ್ಮು ಮತ್ತು ಕಾಶ್ಮೀರ ಮರುಸಂಘಟನಾ ಕಾಯ್ದೆ ಅಂಗೀಕಾರವಾದ ದಿನದಂದು, ಗೃಹ ಸಚಿವರು ಮೊದಲು ಗಡಿ ನಿರ್ಣಯ, ನಂತರ ವಿಧಾನಸಭಾ ಚುನಾವಣೆ ಹಾಗೂ ಸೂಕ್ತ ಸಮಯದಲ್ಲಿ ರಾಜ್ಯ ಸ್ಥಾನಮಾನ ಮರುಸ್ಥಾಪನೆ ನಡೆಯಲಿದೆ ಎಂದು ಸಂಸತ್ತಿಗೆ ತಿಳಿಸಿದ್ದಾರೆ. ಜೆ & ಕೆನಲ್ಲಿ ವಿಧಾನಸಭಾ ಚುನಾವಣೆ ನಡೆದಾಗ, ಪರಿಸ್ಥಿತಿ ಎಲ್ಲರಿಗೂ ಸ್ಪಷ್ಟವಾಗಿತ್ತು. ರಾಜ್ಯ ಸ್ಥಾನಮಾನ ಪಡೆದ ನಂತರವೇ ಕೆಲಸ ಮಾಡಲಾಗುತ್ತದೆ ಎಂಬ ನೆಪವನ್ನು ಒಪ್ಪಿಕೊಳ್ಳಲಾಗುವುದಿಲ್ಲಎಂದು ಹೇಳಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net