ದೇವರ ಹುಂಡಿಯಲ್ಲಿ ಸಿಕ್ಕಿತು ವಿಕೃತ ಕೋರಿಕೆಯ ಹರಕೆ ಚೀಟಿ; ನರಳಿ ನರಳಿ ಸಾಯಲಿ ಎಂದು ಬೇಡಿಕೆ!

Temple
Published on

ಚಾಮರಾಜನಗರ: ನನಗೆ ಒಳ್ಳೆಯದಾಗಲಿ, ನನ್ನವರಿಗೆ ಒಳ್ಳೆಯದಾಗಲಿ, ನಮ್ಮವರಿಗೆ ಒಳಿತಾಗಲಿ ಎಂದು ದೇವರಲ್ಲಿ ಕೋರಿಕೆ ಸಲ್ಲಿಸುವುದುಂಟು. ಮಾತ್ರವಲ್ಲ, ಇಂಥದ್ದೇ ಕೋರಿಕೆಗಳೊಂದಿಗೆ ಹರಕೆ ಹೇಳಿಕೊಳ್ಳುವುದೂ ಇರುತ್ತದೆ. ಆದರೆ ಇಲ್ಲೊಂದು ಕಡೆ ದೇವರ ಹರಕೆ ಹುಂಡಿಯಲ್ಲಿ ವಿಕೃತ ಕೋರಿಕೆಯ ಚೀಟಿ ಸಿಕ್ಕಿದೆ.

ಚಾಮರಾಜನಗರದ ಕೊಳ್ಳೇಗಾಲದ ಶ್ರೀಲಕ್ಷ್ಮೀನಾರಾಯಣ ದೇವಾಲಯದ ಹುಂಡಿ ಎಣಿಕೆ ವೇಳೆ ವಿಚಿತ್ರವಾದ ಕೋರಿಕೆಯ ಹರಕೆ ಚೀಟಿ ಸಿಕ್ಕಿದೆ. ಭಕ್ತನೊಬ್ಬನ ವಿಕೃತ ಮನಸ್ಥಿತಿಯನ್ನು ಈ ಹರಕೆ ಚೀಟಿ ಅನಾವರಣಗೊಳಿಸಿದೆ. ಬಳ್ಳಾರಿ ಜಿಲ್ಲೆಯ ವಿಳಾಸ ಬರೆದು ಈ ಹರಕೆ ಚೀಟಿಯನ್ನು ಹುಂಡಿಗೆ ಹಾಕಲಾಗಿದೆ.

ಒಂದು ಕುಟುಂಬದವರ ಹೆಸರು ಬರೆದು, ಇವರೆಲ್ಲ ನರಳಿ ನರಳಿ ಸಾಯಬೇಕು, ನಮ್ಮ ಮನೆಯ ಬಳಿ ಇವರು ಇರದಂತೆ ಮಾಡಬೇಕು, ಒಂದು ವರ್ಷದೊಳಗೆ ಇವನು ಸಾಯಬೇಕು ಎಂಬುದಾಗಿ ಬರೆದಿರುವ ಚೀಟಿ ಈ ದೇವಸ್ಥಾನದ ಹುಂಡಿ ಹಣ ಎಣಿಕೆ ವೇಳೆ ಸಿಕ್ಕಿದೆ. ಈ ವಿಚಿತ್ರ ಹಾಗೂ ವಿಕೃತ ಹರಕೆ ಚೀಟಿಯನ್ನು ನೋಡಿ ದೇವಸ್ಥಾನದ ಸಿಬ್ಬಂದಿಯೂ ಒಮ್ಮೆ ದಿಗ್ಭ್ರಾಂತರಾಗುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net