ಒಳಮೀಸಲಾತಿ ವಿರೋಧಿಸಿ ಪತ್ರ ಚಳವಳಿ

Letter movement against internal reservation
ಬಸವನಬಾಗೇವಾಡಿ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರ ಚಳವಳಿಯಲ್ಲಿ ಪಾಲ್ಗೊಂಡ ಮುಖಂಡರು.
Published on

ಬಸವನಬಾಗೇವಾಡಿ: ಜನಸಂಖ್ಯೆ ಆದರದ ಮೇಲೆ ಒಳಮೀಸಲಾತಿ ಜಾರಿಗೆ ತರುತ್ತಿರುವ ರಾಜ್ಯಸರ್ಕಾರದ ಕ್ರಮ ವಿರೋಧಿಸಿ ಬಂಜಾರಾ ಸಮಾಜದ ಪ್ರಮುಖರು ಪಟ್ಟಣದಲ್ಲಿ ಗುರುವಾರ ಪತ್ರ ಚಳವಳಿ ಹಮ್ಮಿಕೊಂಡಿದ್ದರು.

ನಂತರ ಮಾತನಾಡಿದ ಕರ್ನಾಟಕ ಪ್ರದೇಶ ಬಂಜಾರ ಸಮಾಜದ ಜಿಲ್ಲಾದ ಡಾ.ಬಸವರಾಜ ಚವ್ಹಾಣ, ನ್ಯಾ.ನಾಗಮೋಹನ್​ ದಾಸ ಅವರು 2011ರ ಜನಸಂಖ್ಯೆ ಪರಿಗಣಿಸದೆ, ಕೇಂದ್ರ ಸರ್ಕಾರ ನಡೆಸಲಿರುವ 2025 ರ ಜನಗಣತಿ ಪರಿಗಣಿಸಬೇಕು. ಆಗ ಮಾತ್ರ ಎಲ್ಲರಿಗೂ ನ್ಯಾಯಸಿಗಲು ಸಾಧ್ಯ ಎಂದು ಪ್ರತಿಪಾದಿಸಿದರು.

ಎಲ್ಲೋ ಕುಳಿತು, ಯಾರೋ ಹೇಳಿದಂತೆ ವರದಿ ಸಿದ್ಧಪಡಿಸಬಾರದು, ಪ್ರತಿ ತಾಂಡಾಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಅರಿತು ಸಮಗ್ರ ವರದಿ

ಸಿದ್ಧಪಡಿಸಬೇಕು. ಸುಪ್ರೀಂಕೋರ್ಟ್​ ಕೂಡ ಇದನ್ನೇ ಹೇಳಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ನಾಯಕ, ಹರಿಲಾಲ್​ ನಾಯಕ, ಕೃಷ್ಣ ನಾಯಕ, ಗುರಪ್ಪ ಲಮಾಣಿ, ಡಾ.ಅರವಿಂದ ಚವ್ಹಾಣ, ರವಿ ಲಮಾಣಿ, ಬಾಬು ಚವ್ಹಾಣ, ಶಾಂತಪ್ಪ ರಾಠೋಡ್​, ವಿನೋದ ನಾಯಕ, ಪಿಂಟು ಚವ್ಹಾಣ, ಸುಭಾಷಚಂದ್ರ ರಾಠೋಡ, ರಾಜು ಲಮಾಣಿ, ಭೀಮು ಪವಾರ, ಆನಂದ ಲಮಾಣಿ, ಸುನಿಲ್​ ನಾಯಕ, ವಿಜಯ್​ ನಾಯಕ, ನಂಜುಂಡಿ ಚವ್ಹಾಣ, ಮೀಟು ಜಾಧವ, ಸಂತೋಷ ನಾಯಕ, ಕುಮಾರ್​ ನಾಗಾವಾಡ, ರುಕ್ಮೀಣಿ ರಾಠೋಡ ಪತ್ರ ಚಳವಳಿಯಲ್ಲಿ ಪಾಲ್ಗೊಂಡಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net