ಅಪ್ಪನ್ನ ಕೇಳಿ ರಾಜಕೀಯ ಇತಿಹಾಸ ತಿಳಿದುಕೊಳ್ಳಲಿ

11klr3- k.y.najegowda
Published on

ಕೋಲಾರ: ನಿಖಿಲ್​ ಇನ್ನು ರಾಜಕೀಯಕ್ಕೆ ಹೊಸಬ, ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಹೆಸರು ಹೇಳಿಕೊಂಡು ಈಗೀಗ ಪ್ರವೇಶ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಿಂದ ಇಲ್ಲಿಯ ವರೆಗೂ ರಾಜಕೀಯ ಸಾಧನೆ ಮಾಡಿದ್ದೇವೆ. ಈ ಬಗ್ಗೆ ಕುಮಾರಸ್ವಾಮಿ ಅವರಿಗೆ ಗೊತ್ತಿದ್ದು, ಕೇಳಿ ತಿಳಿದುಕೊಳ್ಳಲಿ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಕೊಮ್ಮನಹಳ್ಳಿ ಗೃಹ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್​ಗಾಗಿ ದುಡಿದವರಿಗೆ ಯಾರಿಗೂ ನ್ಯಾಯ ಸಿಕ್ಕಿಲ್ಲ, ಮಾಲೂರಿನಲ್ಲಿ ಹಿಂದೆ ಜೆಡಿಎಸ್​ ಕಟ್ಟಿದವರು ಯಾರು ಎಂದು ಇತಿಹಾಸ ತಿಳಿಯಿರಿ ಎಂದು ತಿಳಿಸಿದರು.

ಜೆಡಿಎಸ್​ನಿಂದ ಕೋಮುಲ್​ ನಿರ್ದೇಶಕರಾಗಿ, ಜಿಪಂ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ. ಮಾಹಿತಿ ಕೊರತೆಯಿಂದ ಹೇಳಿಕೆ ನೀಡಿದ್ದಾರೆ. ನಾನು ಮೂಲತ@ ಕಾಂಗ್ರೆಸ್​ ಪಕ್ಷದವರು. ದ್ಯಾವಿರಪ್ಪ ಅವರು ಶಾಸಕರಾದ ಮೇಲೆ ಜೆಡಿಎಸ್​ ಕಾರ್ಯಕರ್ತರು ಇರಲಿಲ್ಲ. ಮತದಾರರು ಇದಿದ್ದು 1,500 ಮತಗಳಿಂದ 25 ಸಾವಿರ ಮತ ಕೊಡಿಸುವ ಪ್ರಯತ್ನ ಮಾಡಿದೇವು. ಇಲ್ಲಿನ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಹಿಂದೆ ಜೆಡಿಎಸ್​ನಿಂದ ಜಿಪಂ ಚುನಾವಣೆಗೆ ಸ್ಪರ್ಧೆ ಮಾಡಲು ಯಾರೂ ಮುಂದೆ ಬರಲಿಲ್ಲ. ಆಗ ನನ್ನ ಶ್ರೀಮತಿ ರತ್ನಮ್ಮ ಅವರನ್ನು ಕಣಕ್ಕೆ ಇಳಿಸಿ, ಸ್ವಂತ ವರ್ಚಸ್ಸಿನ ಮೇರೆಗೆ ಗೆದ್ದು ಸಾಧನೆ ತೋರಿಸಿದೇವು. ಆ ಸಂದರ್ಭದಲ್ಲಿ ಮಾಲೂರು ಕ್ಷೇತ್ರದಿಂದ ಶಾಸಕನನ್ನು ಗೆಲ್ಲಿಸಿಕೊಂಡು ಬರುವುದಾಗಿ ಕುಮಾರಣ್ಣ ಅವರಿಗೆ ಮಾತು ಕೊಟ್ಟೆ, ಆಗ ಮಂಜುನಾಥ್​ ಗೌಡರಿಗೆ ಟಿಕೆಟ್​ ಕೊಡಿಸಿ ಗೆಲ್ಲಿಸಿಕೊಂಡೇವು, ಇದು ಇತಿಹಾಸ ಎಂದು ತಿಳಿಸಿದರು.

ಇದಾದ ನಂತರ ಸ್ಥಳಿಯ ಸಂಸ್ಥೆಗಳ ವಿಧಾನ ಪರಿಷತ್​ ಕ್ಷೇತ್ರದಿಂದ ಟಿಕೆಟ್​ ಕೇಳಿದಾಗ ಮಾತು ತಪ್ಪಿ, ಮನೋಹರ್​ ಅವರಿಗೆ ಕೊಡುತ್ತಾರೆ. ಆಗ ನಾನು ಸಹ ನಾಮಪತ್ರ ಸಲ್ಲಿಸಿದ್ದೇ. ಆಗ ಕೊಮ್ಮನಹಳ್ಳಿ ಮನೆಗೆ ಬಂದು ಉಮೇದುವಾರಿಕೆ ಪಾಪಸ್​ ತೆಗೆದೆ. ಇದರಿಂದ ಒಂದು ಸ್ಥಾನ ಗೆಲ್ಲಲು ಅವಕಾಶ ಸಿಕ್ಕಿತು, ಇದರ ಬಗ್ಗೆ ನಿಮಗೆ ತಿಳಿದಿದಿಯೇ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net