ಸಾಧು-ಸಂತರ ಮಾರ್ಗದರ್ಶನದಲ್ಲಿ ಸಾಗಲಿ

26Rayabag3
Published on

ರಾಯಬಾಗ: ತಾಲೂಕಿನ ನಸಲಾಪುರ ಗ್ರಾಮದ ೫೨ ವೈದ್ಯರು ವಿವಿಧೆಡೆ ಸೇವೆ ಸಲ್ಲಿಸುತ್ತಿರುವುದು ಇಲ್ಲಿನ ಸಂಸ್ಕೃತಿ ಮತ್ತು ಸಾಧುಸಂತರ ಮಾರ್ಗದರ್ಶನದಿಂದ ಸಾಧ್ಯವಾಗಿದೆ ಎಂದು ಗೊಮ್ಮಟೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎನ್.ಎ.ಮಗದುಮ ಹೇಳಿದರು.

ತಾಲೂಕಿನ ನಸಲಾಪುರ ಗ್ರಾಮದಲ್ಲಿ ಬಾಲಾಚಾರ್ಯ ೧೦೮ ಡಾ.ಸಿದ್ಧಸೇನ ಮುನಿಮಹಾರಾಜರ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಜೈನ ವೈದ್ಯರ ಸಮಾವೇಶದಲ್ಲಿ ಮಾತನಾಡಿ, ಜೈನ ಧರ್ಮ ಅಹಿಂಸಾ ಪರಮೋ ಧರ್ಮ ತತ್ತ್ವ ಸಿದ್ಧಾಂತ ಹೊಂದಿದೆ. ಅದೇ ನಿಟ್ಟಿನಲ್ಲಿ ವೈದ್ಯರು ಕೋವಿಡ್ ಸಮಯದಲ್ಲಿ ಪ್ರಾಮಾಣಿಕತೆಯಿಂದ ರೋಗಿಗಳ ಸೇವೆ ಸಲ್ಲಿಸಿದ್ದಾರೆ ಎಂದರು.

ಡಾ.ಸಿದ್ಧಸೇನ ಮಹಾರಾಜರು ಮಾತನಾಡಿ, ಪುರಾತನ ಜೈನಶಾಸ್ತ್ರದಂತೆ ಯೋಗಾಸನ, ಆಹಾರ ಸೇವನೆ ಜೈನ ಸಿದ್ಧಾಂತದಲ್ಲಿ ಬೆಳೆದು ಬಂದಿದೆ. ಎಲ್ಲರೂ ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಹೊಂದಲು ಸಹಕಾರಿ ಎಂದರು.

ಸಿಬಿಕೆಎಸ್‌ಎಸ್‌ಕೆ ನಿರ್ದೇಶಕ ಭರತೇಶ ಬನವಣೆ ಮಾತನಾಡಿದರು.

ವೈದ್ಯರಾದ ಡಾ.ಪರಾಗ ಮೆಳವಂಕಿ, ಸಂಜಯ ಪಾಟೀಲ, ಎಸ್.ಕೆ.ಪಾಟೀಲ, ರಮೇಶ ಕಿಚಡೆ, ಪದ್ಮರಾಜ ಪಾಟೀಲ, ಸುಧೀರ ಪಾಟೀಲ, ಅಮಿತ ಮಗದುಮï, ಪ್ರಗತಿ ಪಾಟೀಲ, ಲಲಿತಾ ಮಗದುಮ, ಸೂರಜ ಪಾಟೀಲ, ಜಯವರ್ಧನ ಮಿರ್ಜೆ, ಸತೀಶ ಮುಗ್ಗಣ್ಣವರ, ಅಮಿತ ಚೌಗಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net