ಹಸಿ ಅಡಕೆ ಸಂಸ್ಕರಣೆ ಬಗ್ಗೆ ಸಂಶೋಧನೆಯಾಗಲಿ

BASAVARAJ
Published on

ಎನ್.ಆರ್.ಪುರ: ಕೊಯ್ಲಿಗೆ ಬಂದ ಹಸಿ ಅಡಕೆಯನ್ನು ಕೆಲವು ತಿಂಗಳು ತಾಜಾತನ ಉಳಿಸಿಕೊಂಡು ಸಂಸ್ಕರಣೆ ಮಾಡವ ಕುರಿತು ವಿಶ್ವ ವಿದ್ಯಾನಿಲಯ, ಸಂಶೋಧನ ಕೇಂದ್ರಗಳು, ಸರ್ಕಾರ ಅಥವಾ ಸಂಘ ಸಂಸ್ಥೆಗಳು ಸಂಶೋಧನೆ ನಡೆಸಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜ್ ಒತ್ತಾಯಿಸಿದ್ದಾರೆ.

ಮಲೆನಾಡು ಭಾಗದಲ್ಲಿ ಆಗಸ್ಟ್‌ನಿಂದ ೆಬ್ರವರಿಯವರೆಗೆ ಅಡಕೆ ಕೊಯ್ಲಿಗೆ ಬರುತ್ತದೆ. ಈ ಸಂದರ್ಭದಲ್ಲಿ ಅಕಾಲಿಕ ಮಳೆಯಾಗಿ ಕೊಯ್ಲಿಗೆ, ಸಂಸ್ಕರಣೆ ಕಷ್ಟವಾಗಲಿದೆ. ಎಲ್ಲಕಡೆ ಇದೆ ವೇಳೆ ಕೊಯ್ಲು ಪ್ರಾರಂಭವಾಗಿರುವುದರಿಂದ ಕೆಲಸಗಾರರ ಸಮಸ್ಯೆಯೂ ಹೆಚ್ಚಾಗುತ್ತಿದೆ. ನೈಸರ್ಗಿಕ ವಿಕೋಪಗಳಿಂದ ಇತ್ತೀಚಿನ ದಿನಗಳಲ್ಲಿ ಅನೇಕ ರೋಗಗಳಿಂದ ಅಡಕೆ ಬೆಳೆಗಾರರು ಇಳುವರಿ ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈಗ ಅಡಕೆ ಜಾಗತಿಕವಾಗಿ ಭಾರತ, ಬಾಂಗ್ಲಾ, ಭೂತಾನ್, ಚೀನಾ, ಇಂಡೋನೇಷ್ಯಾ, ನೇಪಾಳ, ಶ್ರೀಲಂಕಾ, ಥೈಲ್ಯಾಂಡ್, ಮಯನ್ಮಾರ್ ದೇಶಗಳಲ್ಲಿ ಬೆಳೆಯುತ್ತಿದ್ದಾರೆ. ಭಾರತದಲ್ಲಿ ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ,ಮೇಘಾಲಯ, ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ವಿಶ್ವದಲ್ಲಿ ಭಾರತದ ಉತ್ಪಾದನೆ ಶೇ.58 ರಷ್ಟಾಗಿದೆ. ಭಾರತದಲ್ಲಿ ಕರ್ನಾಟಕದ ಕೊಡುಗೆ ಶೇ.73ರಷ್ಟಿದೆ. ಮಲೆನಾಡು ಭಾಗಗಳಲ್ಲಿ ನೈಸರ್ಗಿಕ ವಿಪತ್ತು, ಕೆಲಸಗಾರರ ಸಮಸ್ಯೆ ಅಧಿಕವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net