ಸಾಧನೆಗೆ ನಿರಂತರ ಪ್ರಯತ್ನ ಇರಲಿ

discussion
ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ಜ್ಞಾನದೀಪ ಹಬ್ಬದ ಅಂಗವಾಗಿ ಹಳೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಶ್ರೀಕಾಂತ್ ಎಂ. ಹೆಗಡೆ, ಡಾ. ವರ್ಷಾ, ಡಾ. ಅನಿಮಿಷಾ ಇತರರಿದ್ದರು.
Published on

ಹೊಳೆಹೊನ್ನೂರು: ಪ್ರಯತ್ನದಲ್ಲಿ ವಿಲವಾದರೆ ಸಾಫಲ್ಯಕ್ಕೆ ಸತತ ಪ್ರಯತ್ನವೇ ಉತ್ತರವಾಗಬೇಕು ಎಂದು ಜ್ಞಾನದೀಪ ವಿದ್ಯಾಸಂಸ್ಥೆ ಪ್ರಾಚಾರ್ಯ ಶ್ರೀಕಾಂತ್ ಎಂ. ಹೆಗಡೆ ಹೇಳಿದರು.

ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ಜ್ಞಾನದೀಪ ಹಬ್ಬದ ಅಂಗವಾಗಿ ಆಯೋಜಿಸಿದ್ದ ಹಳೆಯ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ನಮ್ಮ ಮಕ್ಕಳು ದೇಶದ ಭವಿಷ್ಯ. ಅವರನ್ನು ಅವಶ್ಯಕತೆಗೆ ತಕ್ಕಂತೆ ಸಿದ್ಧಗೊಳಿಸುವುದು ತುರ್ತಿದೆ ಎಂದರು.

ಮುಂದೆ ಬರುವ ಅವಕಾಶಕ್ಕಾಗಿ ಕಾಯದೆ ಇಂದಿನ ಅವಕಾಶಗಳನ್ನು ಕೈ ಚೆಲ್ಲಬಾರದು. ಶಾಲೆಯಲ್ಲಿ ಮಕ್ಕಳಿಗೆ ಶ್ರೇಷ್ಠ ನೆನಪುಗಳು ಉಳಿಯುವಂತೆ ಮಾಡಲು ಚಟುವಟಿಕೆಗಳು ಮಹತ್ತರ ಪಾತ್ರವಹಿಸುತ್ತವೆ. ಆ ನಿಟ್ಟಿನಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘವು ಮಹತ್ತರ ಕೆಲಸ ಮಾಡುತ್ತಿದೆ. ಹಳೆಯ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ಮಾತ್ರ ಮಕ್ಕಳಲ್ಲಿ ಹೊಸ ಕಲ್ಪನೆ ತರಲು ಪೂರಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಡಾ. ವರ್ಷಾ ಆರ್. ಪಾಟೀಲ್ ಮಾತನಾಡಿ, ಪರೀಕ್ಷೆಗಳು ಒಂದೇ ರೀತಿ ಇದ್ದರೂ ವಿದ್ಯಾರ್ಥಿಗಳ ಪೂರ್ವ ತಯಾರಿ ವಿಭಿನ್ನವಾಗಿ ಇರಬೇಕಾಗುತ್ತದೆ. ಮಕ್ಕಳು ಪರಿಕಲ್ಪನೆಗಳನ್ನು ಅರ್ಥೈಸಿಕೊಂಡು ಸ್ವಯಂ ಅನುಭವದ ಜತೆಗೆ ಸಮನ್ವಯ ಮಾಡಿಕೊಂಡಾಗ ಗೆಲುವು ಸಾಧ್ಯ. ಒಂದು ಸವಾಲನ್ನು ಎದುರಿಸಿ ಅದರ ಸತ್ಯಾಸತ್ಯತೆ ಕಂಡುಕೊಳ್ಳುವುದು ಅವರವರ ಸಾಮರ್ಥ್ಯವನ್ನು ಆಧರಿಸಿರುತ್ತದೆ ಎಂದರು.

ಉಪ ಪ್ರಾಚಾರ್ಯರಾದ ರೆಜಿ ಜೋಸ್ೆ, ವಾಣಿ ಕೃಷ್ಣಪ್ರಸಾದ್, ಅಭಿಯಂತ ಸಚಿನ್ ಎಸ್. ಕಾಂತ್, ಡಾ. ಅನಿಮಿಷಾ ರಸ್ತಾಪುರ್ ಮಠ, ಮಲ್ಲಿಕಾರ್ಜುನ್ ತುರುವನೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net