ತತ್ವ, ಸಿದ್ಧಾಂತಗಳನ್ನಯ ಯುವಜನತೆ ಮೈಗೂಡಿಸಿಕೊಳ್ಳಲಿ

29 SARAG 1
filter: 0; fileterIntensity: 0.000000; filterMask: 0; captureOrientation: 0; shaking: 0.042898; highlight: 1; algolist: 0; multi-frame: 1; brp_mask: 0; brp_del_th: 0.0000,0.0000; brp_del_sen: 0.0000,0.0000; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 38;
Published on

ಸರಗೂರು: ಸರ್ವ ಜನಾಂಗದವರು ಒಪ್ಪಿಕೊಳ್ಳುವ 12ನೇ ಶತಮಾನದ ಸಾಮಾಜಿಕ ಹರಿಕಾರ ಶ್ರೀ ಜಗಜ್ಯೋತಿ ಬಸವಣ್ಣ ಅವರ ತತ್ವ, ಸಿದ್ಧಾಂತಗಳನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕು ಎಂದು ನರೇಗಾ ಯೋಜನಾಧಿಕಾರಿ ಮಹದೇವಸ್ವಾಮಿ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಸಾರ್ವಜನಿಕ ಶಾಖಾ ಗ್ರಂಥಾಲಯದಲ್ಲಿ ಬುಧವಾರ ಆಯೋಜಿಸಿದ್ದ ಬಸವ ಜಯಂತಿ ಸರಳ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಜಾತಿ ಭೇದ ಮತ್ತು ಲಿಂಗ ತಾರತಮ್ಮ ಇಲ್ಲದೆ ಸಮಾಜವನ್ನು ರೂಪಿಸುವ ಕೆಲಸವನ್ನು ಬಸವಣ್ಣ ಮಾಡಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವು ಇದನ್ನೇ ಎತ್ತಿಹಿಡಿದಿದೆ ರಾಜಕಿಯ, ಸಾಮಾಜಿಕ, ಆರ್ಥಿಕ ಹಾಗೂ ತಾತ್ವಿಕ ಮೌಲ್ಯಗಳನ್ನು ಪ್ರತಿಪಾದಿಸಿದ ಅವರು ಅಂತರ್ಜಾತಿಯ ವಿವಾಹಕ್ಕೆ ಪ್ರೋತ್ಸಾಹ ಸಹಭೋಜನಕ್ಕೆ ಪ್ರೋತ್ಸಾಹ ನೀಡಿದ್ದರು. ಇಂತಹ ಮಹಾನ್ ಸುಧಾರಕರು ಬರೆದಿರುವ ವಚನಗಳನ್ನು ವಿದ್ಯಾರ್ಥಿಗಳು ಓದಿ ಅರ್ಥೈಸಿಕೊಳ್ಳಬೇಕು ಎಂದರು.

ಗ್ರಂಥಪಾಲಕ ಬಿಡಗಲು ಶಿವಣ್ಣ ಮಾತನಾಡಿ, ಬಸವಣ್ಣ ಯಾವುದೇ ಒಂದು ಧರ್ಮಕ್ಕೆ ಸಿಮೀತರಾದವರಲ್ಲ. ಅವರು ಇಡೀ ಮಾನವಕುಲಕ್ಕೆ ಸಲ್ಲುವವರು. 12ನೇ ಶತಮಾನದಲ್ಲಿ ಸಮಾಜದ ಅನಾಚಾರಗಳಿಗೆ ವಿರುದ್ಧವಾಗಿ ವಚನ ಸಾಹಿತ್ಯದ ಮೂಲಕ ಉತ್ತರ ನೀಡಿದರು ಎಂದು ಸ್ಮರಿಸಿದರು.

ತಾಲೂಕು ಪಂಚಾಯಿತಿ ಸಿಬ್ಬಂದಿ ಜಯರಾಮು, ಮಂಜು, ಕಿರಣ್, ಕುಮಾರ್, ಜಗದೀಶ್, ತಮ್ಮಯ್ಯ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರವಿ, ಸೋಮು, ಮಧು, ರಾಘವ, ರಾಜು, ಪುನೀತ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net