ಸಾಮಾಜಿಕ ಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳಲಿ

BKL PADAGRAHANA
Published on

ಭಟ್ಕಳ: ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವಿಲ್ಲ, ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ರೋಟಾರಿಯನ್ ಡಾ. ಗೌರೀಶ ಪಡುಕೋಣೆ ಹೇಳಿದರು.

ಪಟ್ಟಣದ ಶ್ರೀ ಗುರು ಸುಧೀಂದ್ರ ಮಹಾವಿದ್ಯಾಲಯದ ಘಟಕವಾದ ರೋಟರಾಕ್ಟ್ ಕ್ಲಬ್ ಹಾಗೂ ಆನಂದಾಶ್ರಮ, ಶ್ರೀವಲಿ ಹಾಗೂ ವಿದ್ಯಾಂಜಲಿ ಶಾಲೆಯ 2024-25ನೇ ಸಾಲಿನ ಇಂಟರಾಕ್ಟ್ ಕ್ಲಬ್​ಗಳ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.

ರೋಟರಿ ಅಧ್ಯಕ್ಷ ಇಷ್ತಿಯಾಕ್ ಹಸ್ಸನ್, ಕಾರ್ಯದರ್ಶಿ ಡಾ. ಝುಹೀರ್ ಕೋಲಾ ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು. ಭಟ್ಕಳ ಎಜುಕೇಷನ್ ಟ್ರಸ್ಟ್​ನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀನಾಥ ಪೈ, ರೋಟರಾಕ್ಟ್ ಸಂಯೋಜಕ ದೇವೇಂದ್ರ ಕಿಣಿ, ರೋಟರಾಕ್ಟ್ ನೂತನ ಅಧ್ಯಕ್ಷೆ ರಮ್ಯಾ ರಾವ್, ಕಾರ್ಯದರ್ಶಿ ಛಾಯಾ ಪುರಾಣಿಕ, ಖಜಾಂಚಿ ದಿವ್ಯಾ ಮೊಗೇರ, ರೋಟರಿ, ರೋಟರಾಕ್ಟ್ ಮತ್ತು ಇಂಟರಾಕ್ಟ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

ರೋಟರಾಕ್ಟ್ ನಿಕಟಪೂರ್ವ ಅಧ್ಯಕ್ಷೆ ವೈಷ್ಣವಿ ನಾಯ್ಕ ಸ್ವಾಗತಿಸಿದರು, ಕಾರ್ಯದರ್ಶಿ ಪ್ರಜ್ಞಾ ಗೋಳಿ ರೋಟರಾಕ್ಟ್ ಚಟುವಟಿಕೆಗಳ ವರದಿ ವಾಚಿಸಿದರು ಸದಸ್ಯರಾದ ಪವಿತ್ರಾ ನಾಯ್ಕ ಮತ್ತು ವಿನುತಾ ನಾಯ್ಕ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net