

ಕೋಲಾರ: ಕೊಲೆ ವಾಡಿರುವ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು. ನಮ್ಮ ಪೊಲೀಸ್ ಇಲಾಖೆಯ ಅಧಿಕಾರಿಗಳು ಬೇಗ ಅಪರಾಧಿಗಳನ್ನು ಬಂಧಿಸುತ್ತಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಮಾಲೂರು ತಾಲೂಕಿನ ಜಯಮಂಗಲ ಗ್ರಾಪಂ ವ್ಯಾಪ್ತಿಯ ಮಿಣಸಂದ್ರದಲ್ಲಿ ಮಂಗಳವಾರ ಗ್ರಾಪಂ ಸದಸ್ಯ ಅನಿಲ್‌ಕುವಾರ್ ಅವರ 11ನೇ ದಿನದ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿ ಪುಷ್ಪನಮನ ಸಲ್ಲಿಸಿ ವಾತನಾಡಿದರು. ನಾವು ಯೂರೋಪ್ ಪ್ರವಾಸ ಕೈಗೊಂಡ ವಾರನೇ ದಿನವೇ ಪಕ್ಷದ ಮುಖಂಡ ಅನಿಲ್‌ಕುವಾರ್ ಅವರನ್ನು ಕೊಲೆ ವಾಡಲಾಗಿದೆ. ಟನೆ ಕೇಳಿದ ನಂತರ ಪ್ರವಾಸದಿಂದ ಹಿಂದಿರುಗಿ ಬರಲು ಪ್ರಯತ್ನ ಪಟ್ಟರೂ ವಿವಾನ ದೊರೆಯದ ಕಾರಣ ಈ ದಿನ ವಿವಾನ ನಿಲ್ದಾಣದಿಂದ ನೇರವಾಗಿ ಮಿಣಸಂದ್ರ ಗ್ರಾಮಕ್ಕೆ ಬಂದಿದ್ದೇವೆ. ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತನಾಗಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಿದ ಅನಿಲ್‌ಕುವಾರ್ ಅವರನ್ನು ಕೊಲೆ ವಾಡಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಉತ್ತಮ ವ್ಯಕ್ತಿಯನ್ನು ಕೊಲೆ ವಾಡಿರುವವನ್ನು ಶಿಕ್ಷಿಸಬೇಕು. ಈಗಾಗಲೇ ಪೊಲೀಸರು 6 ಜನರನ್ನು ಬಂಧಿಸಿದ್ದು, ಉಳಿದವರನ್ನು ಹುಡುಕುತ್ತಿದ್ದಾರೆ. ಗ್ರಾಪಂ ಸದಸ್ಯನಾಗಿ ಆಯ್ಕೆಯಾಗಿದ್ದರೂ ತಮ್ಮ ಮನೆಗೆ ಯಾವುದೇ ರೀತಿಯ ಸೌಲಭ್ಯ ಪಡೆಯಲಿಲ್ಲ. ಅವರ ಕುಟುಂಬಕ್ಕೆ, ಗ್ರಾಮದವರಿಗೆ ಹಾಗೂ ಅಭಿವಾನಿಗಳಿಗೆ ಧೈರ್ಯ ತುಂಬುವ ಕೆಲಸ ವಾಡಲಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರ ಕೊಲೆಯಾಗಿದೆ. ಈ ಬಗ್ಗೆ ಗೃಹ ಮಂತ್ರಿಗಳಾದ ಪರಮೇಶ್ವರಗೆ ವಾಹಿತಿ ನೀಡಲಾಗಿದೆ. ಅವರು ಸಹ ವಿಶೇಷವಾಗಿ ತನಿಖೆ ವಾಡಿ ಕೊಲೆ ಅಪರಾಧಿಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರಂತೆ ಜಿಲ್ಲೆಯ ಎಸ್‌ಪಿ ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಲಿದ್ದಾರೆ ಎಂದರು.
ವಾಜಿ ತಾಪಂ ಸದಸ್ಯರಾದ ಸಂಪಂಗೆರೆ ಮುನಿರಾಜು, ಬಾಳಿಗಾನಹಳ್ಳಿ ಶ್ರೀನಿವಾಸ್, ಸಂತೋಷ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಿ.ಜೆ.ಹರೀಶ್, ಜಯಮಂಗಲ ಗ್ರಾಪಂ ಸದಸ್ಯರು ಇದ್ದರು.