ಜ್ಞಾನದೀವಿಗೆಯ ಗ್ರಂಥಾಲಯಗಳ ಬಳಕೆಯಾಗಲಿ

klr dc,webp
ಕೋಲಾರ ಜಿಲ್ಲಾ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಗ್ರಂಥಾಲಯ ಸಪ್ತಾಹವನ್ನು ಜಿಲ್ಲಾಧಿಕಾರಿ ಅಕ್ರಂಪಾಷಾ ಉದ್ಘಾಟಿಸಿದರು.
Published on

ಕೋಲಾರ: ಗ್ರಂಥಾಲಯಗಳು ಅರಿವಿನ ಜ್ಞಾನದೀವಿಗೆಗಳು. ಇಷ್ಟಪಟ್ಟು ಓದಲು ಬರುವವರಿಗೆ, ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷಯ ಭಂಡಾರಗಳಾಗಿವೆ. ಗ್ರಂಥಾಲಯಗಳ ಸಂಪನ್ಮೂಲಗಳು ಎಂದಿಗೂ ಎಲ್ಲಿಯೂ ಬತ್ತಿಹೋಗುವುದಿಲ್ಲ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ತಿಳಿಸಿದರು.

ಜಿಲ್ಲಾ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಾಚಿನ ಕಾಲದಲ್ಲಿ ಮುದ್ರಣಾಲಯಗಳಿರಲಿಲ್ಲ. ಆದ್ದರಿಂದ ಜ್ಞಾನ ಸಂಪಾದಿಸಲು ಬಹಳ ಕಷ್ಟಪಡಬೇಕಾಗುತ್ತಿತ್ತು. ಈಗ ಗ್ರಂಥಗಳು ನಮಗೆ ಬೇಕಾದ ವಿಷಯಗಳನ್ನು ತಿಳಿಸಲು ಸಿದ್ಧವಿರುವುವು. ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಬೇಕಾದ ಗ್ರಂಥಗಳನ್ನು ಓದಿ ಜ್ಞಾನ ಪಡೆಯಬಹುದು ಎಂದರು.

ಆಧುನಿಕ ತಂತ್ರಜ್ಞಾನದಿಂದ ಇಂದಿನ ಮಕ್ಕಳಲ್ಲಿ ಓದುವ ಹವ್ಯಾಸ ಕುಂಠಿತಗೊಳ್ಳುತ್ತಿದೆ. ಒಂದು ವಿಷಯದ ಬಗ್ಗೆ ಅನೇಕ ಗ್ರಂಥಗಳನ್ನು ನೋಡಬೇಕಾದರೆ ನಾವು ಗ್ರಂಥಾಲಯಗಳಿಗೆ ಹೋಗಬೇಕು. ಗ್ರಂಥಾಲಯವೆಂದರೆ ಅಲ್ಲಿ ಎಲ್ಲ ಭಾಷೆಯ ಸಮೃದ್ಧ ಆಗರವಾಗಿದೆ. ಇತ್ತೀಚಿಗೆ ಪುಸ್ತಕಗಳ ಸ್ಥಾನವನ್ನು ಇಂಟರ್​ನೆಟ್​ ಕಬಳಿಸಿದೆ. ಆದರೆ ಪುಸ್ತಕ ಓದಿದಷ್ಟು ಪರಿಣಾಮಕಾರಿ ಫಲಿತಾಂಶ ಜಾಲತಾಣಗಳಲ್ಲಿ ದೊರೆಯುವುದಿಲ್ಲ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಬಿ.ವಿ.ಗೋಪಿನಾಥ್​ ಮಾತನಾಡಿ, ಗ್ರಂಥಗಳು ನಮ್ಮನ್ನು ಯಾರದೇ ಸಹಾಯವಿಲ್ಲದೆ ಗುರಿ ಮುಟ್ಟಲು ಸಹಾಯ ಮಾಡುತ್ತವೆ. ಕೀಳರಿಮೆ ಬಿಟ್ಟು ಕಠಿಣ ಪರಿಶ್ರಮ ಹಾಕಿದರೆ ಎಂತಹ ಸವಾಲನ್ನು ಸುಲಭವಾಗಿ ಪರಿಹರಿಸಬಹುದು ಎಂದರು.

ದೊಡ್ಡ ದೊಡ್ಡ ಸಾಧಕರೆಲ್ಲರೂ ಸಾಧಾರಣ ಕುಟುಂಬದಿಂದ ಬಂದವರು. ಎತ್ತರಕ್ಕೆ ಏರಲು ನಿರಂತರ ಅಧ್ಯಯನ ಸಹಕಾರಿ. ಇ& ಸಪ್ತಾಹದಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ. ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಮಕ್ಕಳು ದಿನನಿತ್ಯದ ಪಠ್ಯದ ಜತೆಗೆ ಪ್ರಚಲಿತ ವಿದ್ಯಾಮಾನಗಳ ಕುರಿತು ಅರಿವು ಬೆಳೆಸಿಕೊಳ್ಳಬೇಕು. ವೃತ್ತಪತ್ರಿಕೆಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಸಮಾಚಾರ ಸಂಗ್ರಹಣೆ ಉತ್ತಮ ಹವ್ಯಾಸವಾಗಿದೆ. ಈ ನಿಟ್ಟಿನಲ್ಲಿ ಗ್ರಂಥಾಲಯಗಳು ಜ್ಞಾನ ಭಂಡಾರವಾಗಿವೆ. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಸುಕೃತ ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷಿ$್ಮ, ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಸಿ.ಗಣೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net