ಎಂಎಸ್‌ಪಿಗೆ ಕಾನೂನು ಖಾತ್ರಿ ಒದಗಿಸಲಿ

9 SND 03
ಸಿಂಧನೂರಿನಲ್ಲಿ ಉಪತಹಸೀಲ್ದಾರ್ ಚಂದ್ರಶೇಖರ್‌ಗೆ ಆಲ್ ಇಂಡಿಯಾ ಯುನೈಟೆಡ್ ಕಿಸಾನ್ ಸಭಾ ಹಾಗೂ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಿಪಿಐ(ಎಂಎಲ್) ಮಾಸ್‌ಲೈನ್ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಯರದಿಹಾಳ, ರೈತ ಸಂಘದ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರ‌್ಗಿ, ಕಾರ್ಯದರ್ಶಿ ಯಲ್ಲಪ್ಪ ಭಜಂತ್ರಿ, ಸಮಿತಿ ಸದಸ್ಯ ವೆಂಕಟೇಶ ಉದ್ಬಾಳ ಇ.ಜೆ. ಇತರರಿದ್ದರು.
Published on

ಸಿಂಧನೂರು: ಕೃಷಿ ಉತ್ಪನ್ನಗಳ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಗೆ ಕಾನೂನು ಖಾತ್ರಿ ಹಾಗೂ ಪಂಜಾಬ್ ಶಂಭು ಗಡಿಯಲ್ಲಿ ಆಮರಣಾಂತ ಹೋರಾಟವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ಯುನೈಟೆಡ್ ಕಿಸಾನ್ ಸಭಾ (ಎಐಯುಕೆಎಸ್)ಹಾಗೂ ರೈತ ಸಂಘದಿಂದ ಉಪತಹಸೀಲ್ದಾರ್ ಚಂದ್ರಶೇಖರಗೆ ಮನವಿ ಸಲ್ಲಿಸಲಾಯಿತು.

ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಗೆ ಕಾನೂನು ಖಾತ್ರಿ ಒದಗಿಸಬೇಕು. ನರೇಗಾ ಯೋಜನೆಯಡಿ ವಾರ್ಷಿಕವಾಗಿ 200 ದಿನ ಕೆಲಸ ಹಾಗೂ 600 ರೂ. ಕೂಲಿ ನಿಗದಿಪಡಿಸಬೇಕು. ಕೃಷಿ ಕಾರ್ಮಿಕರು, ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ರಂಗದಲ್ಲಿ ನ್ಯಾಯ ಒದಗಿಸಬೇಕು. ಅರಣ್ಯ ಹಕ್ಕು ಕಾಯ್ದೆ 2006 ಅನ್ನು ಸಮಗ್ರವಾಗಿ ಅನಷ್ಠಾನಗೊಳಿಸಬೇಕು. ಭೂರಹಿತರಿಗೆ ಭೂಮಿ, ಹಸಿದವರಿಗೆ ಆಹಾರ, ಮನೆ ಇಲ್ಲದವರಿಗೆ ಮನೆ ಮತ್ತು ಉದ್ಯೋಗವಿಲ್ಲದವರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಕಾರ್ಯದರ್ಶಿ ಯಲ್ಲಪ್ಪ ಭಜಂತ್ರಿ, ಸದಸ್ಯರಾದ ವೆಂಕಟೇಶ ಉದ್ಬಾಳ ಇ.ಜೆ, ಎಂ.ಗಂಗರಾಜ ಶಾಂತಿನಗರ, ಪ್ರಸಾದ ಸುಕಾಲಪೇಟೆ, ನಿಂಗಪ್ಪ ಭೇರಿಗಿ, ಶಾಮಿದ್‌ಸಾಬ್ ಗುಂಜಳ್ಳಿಕ್ಯಾಂಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net