ಕನ್ನಡ ವಿಷಯ ಬೋಧನೆ ಸ್ವರೂಪ ಬದಲಾಗಲಿ

sgr kannada (1)
ಸಾಗರದಲ್ಲಿ ಏರ್ಪಡಿಸಿದ್ದ ಕನ್ನಡ ಭಾಷಾ ಪುನಶ್ಚೇತನ ಕಾರ್ಯಾಗಾರವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ ಉದ್ಘಾಟಿಸಿದರು. ಕೆ.ಸಿ.ಸತ್ಯನಾರಾಯಣ, ವಿ.ಸಿ.ಪಾಟೀಲ್, ಡಾ. ನಾಗೇಶ್ ಇತರರಿದ್ದರು.
Published on

ಸಾಗರ: ಮೊಬೈಲ್ ಸೇರಿ ಆಧುನಿಕ ಉಪಕರಣಗಳ ಬಳಕೆಯಿಂದ ಕನ್ನಡ ಭಾಷಾ ಬಳಕೆ ಮತ್ತು ಸಂವಹನ ಕಡಿಮೆಯಾಗುತ್ತಿದೆ. ಕನ್ನಡ ಭಾಷೆ ಬೋಧನೆ ಸವಾಲಾಗುತ್ತಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ ಹೇಳಿದರು.

ಸಾಗರದಲ್ಲಿ ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ ಜಿಲ್ಲೆ ಪದವಿಪೂರ್ವ ಕಾಲೇಜುಗಳ ಕನ್ನಡ ಅಧ್ಯಾಪಕರ ವೇದಿಕೆಯಿಂದ ಏರ್ಪಡಿಸಿದ್ದ ಕನ್ನಡ ಭಾಷಾ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮೊಬೈಲ್ ಎಲ್ಲ ಕಡೆ ವ್ಯಾಪಿಸಿದೆ. ಬಳಕೆ ಜಾಸ್ತಿಯಾದಂತೆ ಆಂಗ್ಲಭಾಷೆಗೆ ಒಗ್ಗಿಕೊಳ್ಳುವ ಮನಸ್ಥಿತಿ ಜಾಸ್ತಿಯಾಗಿದೆ. ಇಂತಹ ಸವಾಲುಗಳ ನಡುವೆಯೂ ಬೋಧಿಸುವ ಜವಾಬ್ದಾರಿ ಕನ್ನಡ ಭಾಷಾ ಉಪನ್ಯಾಸಕರ ಮೇಲಿರುತ್ತದೆ. ಇತ್ತೀಚೆಗೆ ವಿದ್ಯಾರ್ಥಿಗಳ ಭಾಷಾ ಬರವಣಿಗೆಯೂ ಹದಗೆಟ್ಟಿದೆ. ಇದನ್ನು ಸುಧಾರಿಸಿಕೊಳ್ಳುವ ಕುರಿತು ಚಿಂತನ-ಮಂಥನ ನಡೆಸಲು ಇಂತಹ ಕಾರ್ಯಾಗಾರಗಳು ನೆರವಾಗಲಿವೆ ಎಂದರು.

ಕಾಜಾಣ ಜಿಲ್ಲಾಧ್ಯಕ್ಷ ಡಾ. ಸಾಸ್ವೆಹಳ್ಳಿ ಸತೀಶ್ ಮಾತನಾಡಿ, ಇಂತಹ ಕಾರ್ಯಾಗಾರಗಳು ಹೊಸಹೊಸ ವಿಷಯಗಳನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತದೆ. ನಾವು ಕಲಿಯುವ ಜತೆಗೆ ಕಲಿತಿದ್ದನ್ನು ಮಕ್ಕಳಿಗೆ ತಿಳಿಸಲು ಅನುಕೂಲವಾಗುತ್ತದೆ. ಕನ್ನಡ ಭಾಷೆಯನ್ನು ಹೊಸಹೊಸ ರೀತಿ ಬೋಧಿಸುವ ಮೂಲಕ ಬೆಳೆಸಲು ಸಾಧ್ಯವಾಗಿದೆ. ಅತ್ಯಂತ ಸರಳ ಮತ್ತು ಕಲಿಸಲು ಸುಲಭ ಕನ್ನಡ ಭಾಷೆ ಎಂದು ತಿಳಿಸಿದರು.

ಕೆ.ಸಿ.ಸತ್ಯನಾರಾಯಣ, ವಿ.ಸಿ.ಪಾಟೀಲ್, ಡಾ. ನಾಗೇಶ್, ಸಾನ್ವಿ ಜಿ. ಭಟ್, ವಿಶ್ವನಾಥ್, ಡಾ. ಸರ್ಫ್ರಾಜ್ ಚಂದ್ರಗುತ್ತಿ, ಎಲ್.ಎಂ.ಹೆಗಡೆ ಇತರರಿದ್ದರು. ಮೊದಲ ಗೋಷ್ಠಿಯಲ್ಲಿ ಗದ್ಯಸಾಹಿತ್ಯ ಕುರಿತು ಡಾ. ಟಿ.ಗಣಪತಿ, ತೇಜಸ್ವಿ ಮತ್ತು ಕಂಬಾರರ ಕುರಿತು ಡಾ. ಸಬಿತಾ ಬನ್ನಾಡಿ, ಪದ್ಯ ಸಾಹಿತ್ಯ ಕುರಿತು ಡಾ. ಜಿ.ಎಸ್.ಭಟ್ ಉಪನ್ಯಾಸ ನೀಡಿದರು. ಕನ್ನಡ ಭಾಷೆಯಲ್ಲಿ ಪೂರ್ಣಾಂಕ ಗಳಿಸಿದ ವಿದ್ಯಾರ್ಥಿಗಳು, ಶೇ.100 ಫಲಿತಾಂಶ ಪಡೆದ ಶಾಲೆಯ ಅಧ್ಯಾಪಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net