ರೈತರಿಗೆ ಸಕಾಲಕ್ಕೆ ಸಿಗಲಿ ಸೌಲಭ್ಯ

calander
ತ್ಯಾಗರ್ತಿ ಪಿಎಸಿಎಸ್‌ನ ನೂತನ ವರ್ಷದ ಕ್ಯಾಲೆಂಡರನ್ನು ಅಧ್ಯಕ್ಷ ಟಿ.ಕೆ.ಹನುಮಂತಪ್ಪ ಬಿಡುಗಡೆ ಮಾಡಿದರು. ಕಿರಣ್‌ಕುಮಾರ್, ಅಮೃತರಾಜ್, ಇಸಾಕ್, ಪರಶುರಾಮ ಇತರರಿದ್ದರು.
Published on

ತ್ಯಾಗರ್ತಿ: ಸಹಕಾರ ಸಂಘದಲ್ಲಿ ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಮತ್ತು ರಿಯಾಯಿತಿ ದರದಲ್ಲಿ ರಸಗೊಬ್ಬರ ಕೃಷಿ ಉಪಕರಣಗಳು ದೊರೆಯುವಂತಾಗಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಕೆ.ಹನುಮಂತಪ್ಪ ಹೇಳಿದರು

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಪದಗ್ರಹಣ ಹಾಗೂ 2025ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು

ಸಂಘದ ಆಡಳಿತ ಪಾರದರ್ಶಕವಾಗಿ ಇರಬೇಕು. ಸಹಕಾರ ಸಂಘವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಎಲ್ಲ ನಿರ್ದೇಶಕರು ಹಾಗೂ ಸಿಬ್ಬಂದಿ ಶ್ರಮಿಸಬೇಕು. ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ರೈತರಿಗೆ ತಕ್ಷಣ ಮರು ಸಾಲ ನೀಡಬೇಕು. ಈ ವರ್ಷ ಷೇರುದಾರರಿಗೆ ಡಿವಿಡೆಂಡ್ ಘೋಷಿಸಲಾಗುತ್ತದೆ. ಉತ್ತಮ ಆಡಳಿತದ ದೃಷ್ಟಿಯಿಂದ ಸಂಘದ ಸದಸ್ಯರು ಕಾಲಕಾಲಕ್ಕೆ ಸಲಹೆಗಳನ್ನು ನೀಡಬೇಕು ಎಂದು ಹೇಳಿದರು

ಉಪಾಧ್ಯಕ್ಷ ಕಿರಣ್‌ಕುಮಾರ್, ನಿರ್ದೇಶಕರಾದ ಅಮೃತರಾಜ್, ಇಸಾಕ್, ಪರಶುರಾಮ, ಆಶಾ ನಾಗಮಣಿ, ಚಂದ್ರಕಲಾ, ಎಂ.ಎಲ್.ಗಣಪತಿ, ಲೋಕಪ್ಪ, ನಾಗೇಂದ್ರ, ಮಂಜುನಾಥ, ಲಿಂಗರಾಜು, ಕಾರ್ಯದರ್ಶಿ ಜೈಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net