ಗೋಕಾಕ: ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಬೇಕು ಎಂದು ಶಿಣಾಧಿಕಾರಿ ಅಭಿನಂದನ ಜಿರಾಳೆ ಹೇಳಿದರು. ನಗರದ ಎನ್ಇಎಸ್ ಶಾಲೆಯಲ್ಲಿ ಮಂಗಳವಾರ ೇತ್ರ ಶಿಣಾಧಿಕಾರಿಗಳು ಹಾಗೂ ೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಸಮೂಹ ಸಂಪನ್ಮೂಲ ಕೇಂದ್ರ, ಜಿವಿ ಮತ್ತು ಎಸ್.ವಿ.ಕೌತನಾಳಿ ಪ್ರಾಥಮಿಕ ಮತ್ತು ನ್ಯೂ ಇಂಗ್ಲಿಷ್ ಶಾಲೆ ಆಶ್ರಯದಲ್ಲಿ ಗೋಕಾಕ ದಣ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವ ಕಾರ್ಯವಾಗಬೇಕು ಕಾರ್ಯಕ್ರಮದ ಸದುಪಯೋಗ ಪಡೆದು ಮಕ್ಕಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು ಎಂದು ಹಾರೆಸಿದರು. ಕಾರ್ಯಕ್ರಮವನ್ನು ಎನ್ಇಎಸ್ ಸಂಸ್ಥೆಯ ಡಿ.ಎಸ್.ಗೊರೋಶಿ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯ ಬಿ.ಆರ್.ಚಿಪ್ಪಲಕಟ್ಟಿ ಅಧ್ಯತೆ ವಹಿಸಿದ್ದರು. ಎನ್ಇಎಸ್ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಕುರಬೇಟ, ನಿರ್ದೇಶಕ ಬಸವರಾಜ ಕ್ಯಾಸ್ತಿ, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಶಿಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.