ಸಾವಯವ ಕೃಷಿ ಪ್ರೋತ್ಸಾಹಿಸುವ ಕೆಲಸವಾಗಲಿ

IMG-20240306-WA0034
ಎಚ್.ಡಿ. ಕೋಟೆ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರೈತರೇ ಆರೋಗ್ಯವಂತರಾಗಿ ಎಂವ ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ವಿ. ಶ್ರೀನಿವಾಸಪ್ರಸಾದ್,ಶ್ರೀ ಮಹದೇವಸ್ವಾಮೀಜಿ, ನಾರಾಯಣಸ್ವಾಮಿ, ಡಾ.ಎನ್.ಎಸ್.ಮೋಹನ್ ಇತರರು ಇದ್ದರು.
Published on

ಎಚ್.ಡಿ.ಕೋಟೆ : ರಾಸಾಯನಿಕಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುತ್ತಾ ಇಂದು ಮನುಷ್ಯನ ಆಯಸ್ಸು ಕಡಿಮೆಯಾಗುತ್ತಿದೆ ಎಂದು ರಾಜ್ಯ ರೈತ ಕಿಸಾನ್ ಸಂಘದ ಪ್ರಾಂತ್ಯ ಅಧ್ಯಕ್ಷ ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮೈಸೂರಿನ ಪ್ರಲಕ್ಷ ಚಾರಿಟಬಲ್ ಟ್ರಸ್ಟ್, ಚಾಮರಾಜನಗರದ ಡಾ.ಮೋಹನ್ ಎನ್.ಎಸ್. ಸ್ನೇಹ ಬಳಗ, ರಾಜ್ಯ ರೈತ ಕಿಸಾನ್ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬುಧವಾರ ಆಯೋಜಿಸಿದ್ದ ರೈತರೇ ಆರೋಗ್ಯವಂತರಾಗಿರಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾವಯವ ಕೃಷಿ ಪ್ರೋತ್ಸಾಹಿಸುವ ಕೆಲಸ ಸರ್ಕಾರಗಳು ಮಾಡಬೇಕಿದೆ. ರೈತನು ಬೆಳೆದ ಸಾವಯವ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.

ಪುಸ್ತಕ ಬಿಡುಗಡೆಗೊಳಿಸಿದ ಆರ್‌ಎಸ್‌ಎಸ್ ನ ಮುಖಂಡ ಮ.ವೆಂಕರಾಮ್ ಜಿ ಮಾತನಾಡಿ ರೈತರೇ ಆರೋಗ್ಯವಂತರಾಗಿ ಪುಸ್ತಕ ಅಧ್ಯಯನ ಮಾಡಿದಾಗ ರೈತರ ಹಲವಾರು ಸಮಸ್ಯೆಗಳು ಬೆಳಕಿಗೆ ಬರುತ್ತವೆ. ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂಬುದರ ಮೇಲೆಯೂ ಈ ಪುಸ್ತಕದಲ್ಲಿ ಲೇಖಕರು ಬೆಳಕು ಚೆಲ್ಲಿದ್ದಾರೆ ಎಂದು ತಿಳಿಸಿದರು.

ಲೇಖಕ ಡಾ.ಎನ್.ಎಸ್.ಮೋಹನ್ ಮಾತನಾಡಿ ರಾಜ್ಯದಲ್ಲಿ ಒಂದು ವರ್ಷದಿಂದ 700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ಮೈಸೂರು ಭಾಗದಲ್ಲಿ ನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದ ಅವರು, ಜಮೀನಿನಲ್ಲಿ ಕೆಲಸ ಕಾರ್ಯ ಮಾಡುವ ವೇಳೆ ರೈತರಿಗೆ ಹಾವು ಕಡಿತಕ್ಕೊಳಗಾದಾಗ ಮೊದಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಈ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ ಎಂದರು.

ಒಂದು ಲಕ್ಷ ಹೆರಿಗೆ ಆದಾಗ 100ಕ್ಕೂ ಹೆಚ್ಚು ಮಹಿಳೆಯರು ಸಾವನ್ನಪ್ಪುತ್ತಿದ್ದು ಆ ಪ್ರಮಾಣವನ್ನು 50 ಕ್ಕೆ ಇಳಿಸುವ ಗುರಿ ಹೊಂದಲಾಗಿದೆ. ಅದರ ಬಗ್ಗೆಯೂ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ ಎಂದರು.

ಸಂಸದ ವಿ. ಶ್ರೀನಿವಾಸಪ್ರಸಾದ್ ಮಾತನಾಡಿ ಎಚ್.ಡಿ. ಕೋಟೆ ತಾಲೂಕಿನ ಹಲವು ಜನಾಂಗದ ಅಭಿವೃದ್ಧಿಗೆ ಮತ್ತು ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಇಂದಿನ ಸರ್ಕಾರ ಕಾಡೊಳಗೆ ಕಾಡಿನ ರಕ್ಷಣೆ ಮಾಡಿದಂತಹ ಆದಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಕಾಡನ್ನು ನಾಶಪಡಿಸಿದ ನಾಡಿನ ಮಂದಿಗೆ ರೆಸಾರ್ಟ್ ನಿರ್ಮಿಸಲು ಅವಕಾಶ ಕಲ್ಪಿಸುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಬೇಸರಿಸಿದರು.

ಬಿಡುಗಲು ಪಡವಲು ವಿರಕ್ತ ಮಠದ ಶ್ರೀ ಮಹದೇವಸ್ವಾಮೀಜಿ, ಚಾಮರಾಜನಗರ ಹಾಪ್‌ಕಾಮ್ಸ್ ಕೆ.ಎಲ್. ಲೋಕೇಶ್, ಜಿಪಂ ಮಾಜಿ ಸದಸ್ಯ ವೆಂಕಟಸ್ವಾಮಿ, ಪದ್ಮಶ್ರೀ ಪುರಸ್ಕೃತ ಸೋಮಣ್ಣ, ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಮುಖಂಡರಾದ ಹಂಚೀಪುರ ಗುರುಸ್ವಾಮಿ, ಶಿವಪ್ಪಾಜಿ, ಡಾ. ಗಣೇಶ್, ಬಿಜೆಪಿ ಅಧ್ಯಕ್ಷ ಶಂಭೇಗೌಡ, ಕೆ.ಪಿ. ಗುರುಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡ ಪ್ರಮೋದ್, ರಾಜು, ವಿನಯ್, ಜೆ.ಪಿ. ಚಂದ್ರಶೇಖರ್, ಜೆಡಿಎಸ್ ಅಧ್ಯಕ್ಷ ರಾಜೇಂದ್ರ, ಶಿವಣ್ಣ, ಗೋಪಾಲಸ್ವಾಮಿ, ರಂಗಪ್ಪ, ಮನುಗನಹಳ್ಳಿ ಮಂಜುನಾಥ್, ಸೋಮಾಚಾರ್, ಜಯಂತ್, ಶ್ರೀಕಾಂತ್, ಸಂತೋಷ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net