ಬಸವಣ್ಣ ಭಾರತದ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಲಿ

basavannaa
Published on


ಮೈಸೂರು: ಬಸವಣ್ಣ ಭಾರತದ ಸಾಂಸ್ಕೃತಿಕ ರಾಯಭಾರಿ ಎಂದು ಕೇಂದ್ರ ಸರ್ಕಾರವೂ ಘೋಷಿಸಬೇಕು. ಜತೆಗೆ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಬೇಕು ಎಂದು ಬಸವ ಭಾರತ ಪ್ರತಿಷ್ಠಾನದ ಅಧ್ಯಕ್ಷ ವಿ.ಶಿವರುದ್ರಪ್ಪ ಒತ್ತಾಯಿಸಿದರು.
ನಮ್ಮ ಪ್ರತಿಷ್ಠಾನದಿಂದ ಆ.5ರಿಂದ 24ರವರೆಗೆ ಜಿಲ್ಲೆಯ ವಿವಿಧೆಡೆ ಆಯೋಜಿಸಿದ್ದ ಬಸವ ಧರ್ಮ ಜಾಗೃತಿ ಅಭಿಯಾನ, ಇಷ್ಟಲಿಂಗಧಾರಣೆ, ಶಿವಯೋಗ ಹಾಗೂ ಶ್ರಾವಣ ಮಾಸದ ಪ್ರವಚನ ಕಾರ್ಯಗಳು ಯಶಸ್ವಿಯಾಗಿ ನಡೆದಿದೆ. ಅಭಿಯಾನದಲ್ಲಿ ಗ್ರಾಮೀಣ ಮತ್ತು ನಗರ ಭಾಗದ 200 ಮಕ್ಕಳಿಗೆ ಇಷ್ಟಲಿಂಗ ಧಾರಣೆ ಮಾಡಲಾಗಿದೆ. ಬರುವ ಸೆ.5ರಿಂದ 25 ರವರೆಗೆ ಲಿಂಗಧಾರಣೆ, ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷೆ ನಾಗರತ್ನಾ ಗುಂಡಪ್ಪ, ಜಾಗತಿಕ ಲಿಂಗಾಯತ ಮಹಾಸಭಾದ ಮೈಸೂರು ಘಟಕದ ಖಜಾಂಚಿ ಸಿ.ಜಿ.ಸಿದ್ಧಲಿಂಗಸ್ವಾಮಿ, ಪ್ರತಿಷ್ಠಾನದ ಬೆಂಬಲಿಗರಾದ ಬಿ.ರಾಜ ಕಿಶೋರ್, ಎಸ್.ಎಂ.ಪ್ರಸನ್ನ, ವೀರಶಿವಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net