ಮೈತ್ರಿಕೂಟಕ್ಕೆ ಕಡಿಮೆ ಸ್ಥಾನ; ವಿಷಯ ತಿಳಿದು ಬಿಜೆಪಿ ಅಭಿಮಾನಿ ಹೃದಯಾಘಾತಕ್ಕೆ ಬಲಿ

dies heart attack
Published on

ಹುಬ್ಬಳ್ಳಿ : ಲೋಕಸಭಾ ಚುನಾವಣೆಯಲ್ಲಿ ನೀರಿಕ್ಷೆಗಿಂದ ಕಡಿಮೆ ಸ್ಥಾನ ಎನ್‌ಡಿಎ ಪಡೆದ ಹಿನ್ನೆಲೆಯಲ್ಲಿ ಫಲಿತಾಂಶ ನೋಡಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಶಿವಪ್ರಕಾಶ್ ಹಿರೇಮಠ ಮೃತ ದುರ್ದೈವಿ. ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ಘಟನೆ ನಡೆದಿದೆ. ನೀರಿಕ್ಷೆಗಿಂತ ಕಡಿಮೆ ಸ್ಥಾನ ಎನ್‌ಡಿಎ ಪಡೆದ ಹಿನ್ನೆಲೆಯಲ್ಲಿ ಫಲಿತಾಂಶ ನೋಡಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಶಿವಪ್ರಕಾಶ್ ಹಿರೇಮಠ ಕಟ್ಟಾ ಬಿಜೆಪಿ ಅಭಿಮಾನಿಯಾಗಿದ್ದರು. ಮನೆಯ ಸೋಫಾದಲ್ಲಿ ಕುಳಿತು ಟಿವಿಯಲ್ಲಿ ಫಲಿತಾಂಶ ನೋಡುವಾಗ ಶಿವಪ್ರಕಾಶ್ ಕುಸಿದು ಬಿದ್ದಿದ್ದಾರೆ. ಎನ್‌ಡಿಎ 300ರಷ್ಟು ಗಡಿ ದಾಟಲಿಲ್ಲ ಎಂದು ಸುದ್ದಿ ತಿಳಿದ ಶಿವಪ್ರಕಾಶ್‌ ಆಘಾತಕ್ಕೆ ಒಳಗಾಗಿದ್ದಾರೆ. 

https://www.vijayavani.net/loksabha-election-result-2024-candidates-who-lost-in-the-assembly-won-a-landslide-victory-in-the-lok-sabha

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net