ಹಂಪಿ ಉತ್ಸವಕ್ಕೆ ಜನರ ಕೊರತೆ; ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವ

Hampi
Published on

ವಿಜಯನಗರ: ಸರ್ಕಾರದಿಂದ ಆಯೋಜಿಸಲಾದ ಹಂಪಿ ಉತ್ಸವಕ್ಕೆ ಇಂದು ನಿರೀಕ್ಷಿತ ಸಂಖ್ಯೆಯಲ್ಲಿ ಜನರು ಬರದೆ ಕುರ್ಚಿಗಳು ಖಾಲಿ ಉಳಿದಿದ್ದರಿಂದ ಜಿಲ್ಲಾಧಿಕಾರಿಯನ್ನು ಸಚಿವ ಆನಂದ ಸಿಂಗ್ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ​

ಹಂಪಿ ಉತ್ಸವದ ವೇದಿಕೆಯಲ್ಲೇ ಗರಂ ಆದ ಸಚಿವ ಆನಂದ ಸಿಂಗ್ ಅವರು ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಅವರಿಗೆ ಕ್ಲಾಸ್ ತೆಗೆದುಕೊಂಡ ಪ್ರಕರಣ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗಿಯಾಗಿರು ಈ ಉತ್ಸವದಲ್ಲಿ ಜನರ ಕೊರತೆ ಕಂಡುಬಂದು ಮುಜುಗರಕ್ಕೀಡಾಗಿ ಅವರು ಸಿಟ್ಟಾಗಿದ್ದರು.

ಸುಮಾರು ಐದು‌‌ ನಿಮಿಷಗಳ ಕಾಲ ವೇದಿಕೆಯಲ್ಲೇ ಜಿಲ್ಲಾಧಿಕಾರಿಗೆ ಗರಂ ಆಗಿ ಪ್ರಶ್ನೆಗಳನ್ನು ಕೇಳಿದ ಸಚಿವರು, ಬಳಿಕ ಜನ ಕಡಿಮೆ‌ ಇರುವುದಕ್ಕೆ ಮುಖ್ಯಮಂತ್ರಿಯವರಿಗೆ ಸಮಜಾಯಿಷಿಯನ್ನೂ ನೀಡಿದರು. ಸರ್ಕಾರದಿಂದ ಹತ್ತು ಕೋಟಿ ರೂಪಾಯಿ ಖರ್ಚು ಮಾಡಿ ಈ ಉತ್ಸವ ಆಯೋಜಿಸಲಾಗಿದ್ದು, ಹಿಂದೆಲ್ಲ 50ರಿಂದ 60 ಸಾವಿರ ಜನರು ಭಾಗಿಯಾಗುತ್ತಿದ್ದರು. ಆದರೆ ಈ ಸಲ ಈ ಉತ್ಸವದಲ್ಲಿ ಜನರು ನಿರೀಕ್ಷಿತ ಸಂಖ್ಯೆಯಲ್ಲಿ ಬರದೆ ಖಾಲಿ ಕುರ್ಚಿಗಳು ಕಂಡುಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net