ಜನರಲ್ಲಿ ಆತಂಕ ಮೂಡಿಸಿದ ರಸ್ತೆಯಲ್ಲಿ ಕಂಡ ಚಿರತೆ

6-RNR-07
Published on

ರಾಣೆಬೆನ್ನೂರ: ತಾಲೂಕಿನ ಅರೇಮಲ್ಲಾಪುರ&ಚಳಗೇರಿ ಗ್ರಾಮದ ನಡುವಿನ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಚಿರತೆಯೊಂದು ರಸ್ತೆ ಬದಿಯ ಕಾಂಪೌಂಡ್​ ಮೇಲೆ ಕುಳಿತುಕೊಂಡಿರುವುದು ಸುತ್ತಲಿನ ಜನರಲ್ಲಿ ಭಾರಿ ಆತಂಕ ಮೂಡಿಸಿದೆ.

ಬೆಳಗಿನ ಸಮಯದಲ್ಲಿ ಅರೇಮಲ್ಲಾಪುರ ಗ್ರಾಮದ ಬೈಕ್​ ಸವಾರನೊಬ್ಬ ಚಳಗೇರಿ ಗ್ರಾಮಕ್ಕೆ ತೆರಳುತ್ತಿದ್ದ ಸಮಯದಲ್ಲಿ ಚಿರತೆಯು ರಸ್ತೆ ಬದಿಯ ಕಾಂಪೌಂಡ್​ ಗೋಡೆ ಮೇಲೆ ಮಲಗಿಕೊಂಡಿರುವುದು ಕಂಡಿದೆ. ಕೂಡಲೇ ಬೈಕ್​ ನಿಲ್ಲಿಸಿದ ಸವಾರ ಚಿರತೆ ಇರುವುದನ್ನು ವಿಡೀಯೊ ಮಾಡಿಕೊಂಡಿದ್ದಾರೆ.

ಅಲ್ಲದೆ ಈ ರಸ್ತೆ ಮಾರ್ಗವಾಗಿ ಬರುವ ವಾಹನ ಸವಾರರನ್ನು ತಡೆದು ಎಚ್ಚರಿಸಿದ್ದಾನೆ. ಐದು ನಿಮಿಷಗಳ ಕಾಲ ಅಲ್ಲಿಯೆ ಇದ್ದ ಚಿರತೆ ನಂತರ ವಾಹನಗಳ ಸದ್ದು ಕೇಳಿ ಮರಳಿ ಅರಣ್ಯದೊಳಗೆ ಹೋಗಿದೆ. ಈ ಮಾರ್ಗದಲ್ಲಿ ಆಗಾಗ ಚಿರತೆಗಳು ಕಂಡು ಬರುತ್ತಿದ್ದು, ಬೈಕ್​ ಸವಾರರು ಓಡಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಚಿರತೆ ಸೆರೆಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net