ಗುಂಡೂರಲ್ಲಿ ನಾಯಿ ಹೊತ್ತೊಯ್ದ ಚಿರತೆ

leopard
Published on

ಹಾನಗಲ್ಲ: ತಾಲೂಕಿನ ಗುಂಡೂರು ಗ್ರಾಮದ ತೋಟವೊಂದರಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಸಾಕುನಾಯಿಯನ್ನು ಹೊತ್ತೊಯ್ದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಸುಭಾಸ ಕುಂದೂರ ಎಂಬ ರೈತರ ತೋಟದ ಮನೆಯಲ್ಲಿರುವ ಸಿಸಿ ಕ್ಯಾಮರಾದಲ್ಲಿ ಚಿರತೆಯ ಚಲನ-ವಲನಗಳು ದಾಖಲಾಗಿವೆ. ರೈತ ಸಾಕಿದ್ದ ನಾಯಿಯನ್ನು ಶನಿವಾರ ರಾತ್ರಿ ಹೊತ್ತೊಯ್ಯುತ್ತಿರುವುದು ಕಂಡುಬಂದಿದೆ. ಮವಾರ ಬೆಳಗ್ಗೆ ಸಿಸಿ ಟಿವಿ ಕ್ಯಾಮರಾ ಪರಿಶೀಲಿಸಿದಾಗ ಚಿರತೆಯು ನಾಯಿಯನ್ನು ಕಚ್ಚಿಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಗುಂಡೂರು ಭಾಗದ ಗುಡ್ಡದಲ್ಲಿ ಚಿರತೆ ಸಂಚರಿಸುತ್ತಿದ್ದು, ರಾತ್ರಿ ಸಮಯದಲ್ಲಿ ಕೃಷಿ ಕಾರ್ಯಗಳಿಗಾಗಿ ಹೊಲ-ಗದ್ದೆಗಳಿಗೆ ತೆರಳಲು ರೈತರು ಭಯಪಡುವಂತಾಗಿದೆ.

ಮೊದಲು ತಾಲೂಕಿನ ಮಕರವಳ್ಳಿ ಹಾಗೂ ಮಂತಗಿ ಅರಣ್ಯ ಪ್ರದೇಶದಲ್ಲಿ ಆಗಾಗ ಕಂಡು ಬರುತ್ತಿದ್ದ ಚಿರತೆಗಳು, ಈಗ ಗುಂಡೂರು ಭಾಗದಲ್ಲಿ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಕೂಡಲೇ ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆಹಿಡಿಯುವಂತೆ ರೈತರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net