

ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಎಂಬುವರು ಮೈನವಿರೇಳಿಸುವ ವಿಡಿಯೋವೊಂದನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿರತೆ ಮರ ಹತ್ತುವುದು ಗೊತ್ತಿರುವ ವಿಷಯ. ಆದರೆ ಈ ವಿಡಿಯೋದಲ್ಲಿ ಕಾಣುವ ಚಿರತೆ ತಾನು ಬೇಟೆಯಾಡಿದ ಪ್ರಾಣಿಯ ಮೃತದೇಹದೊಂದಿಗೆ ಮರ ಏರುತ್ತದೆ. ಇದನ್ನು ನೋಡಿದರೆ ಮೈ ಜುಂ ಎನ್ನಿಸದೆ ಇರದು...!
ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಮಾ.24ರಂದು ಸಂಜೆ 6ಗಂಟೆಗೆ ಸೆರೆ ಹಿಡಿದಿರುವ ವಿಡಿಯೋ ಇದು ಎಂದು ಐಎಫ್ಎಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಚಿರತೆ ತಾನು ಬೇಟೆಯಾಡಿದ ದೊಡ್ಡ ಜಿಂಕೆಯ ಮೃತದೇಹವನ್ನು ಬಾಯಲ್ಲಿ ಕಚ್ಚಿಕೊಂಡು ಒಂದು ನೇರವಾದ ಮರವನ್ನು ಏರುವುದನ್ನು ನೋಡಿದರೆ ಅಬ್ಬಾ ಎನ್ನಿಸುತ್ತದೆ.
ಈ ಅದ್ಭುತ ದೃಶ್ಯವನ್ನೊಳಗೊಂಡ ವಿಡಿಯೋ ಈಗಾಗಲೇ 20,000ದಷ್ಟು ವೀವ್ಸ್ ಪಡೆದಿದೆ. 1400ಕ್ಕೂ ಹೆಚ್ಚು ಲೈಕ್ಸ್ಗಳನ್ನು ಬಂದಿವೆ.
ಚಿರತೆಯ ಸಾಮರ್ಥ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಇದೆಂಥಾ ಎನರ್ಜಿ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್)