

ಚೆನ್ನೈ: ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಅಂತಿಮ ದರ್ಶನಕ್ಕೆ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅಭಿಮಾನಿಗಳ ಮಹಾಪೂರವೇ ಹರಿದುಬರುತ್ತಿದೆ. ಅವರನ್ನು ನಿಯಂತ್ರಿಸಲು ಸ್ಥಳೀಯ ಪೊಲೀಸರು, ಭದ್ರತಾ ಸಿಬ್ಬಂದಿಯವರು ಹರಸಾಹಸಪಡುವಂತಾಗಿದೆ.
ಅಂತಿಮ ದರ್ಶನದ ಸಂದರ್ಭದಲ್ಲಿ, ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮುಂತಾದ ಕರೊನಾ ಹಿನ್ನೆಲೆಯ ನಿಯಮಗಳನ್ನು ಅಭಿಮಾನಿಗಳು ಪಾಲಿಸಬೇಕೆಂದು ಎಸ್ಪಿಬಿ ಅಭಿಮಾನಿಗಳಿಗೆ ಭದ್ರತಾ ಸಿಬ್ಬಂದಿ ತಿಳಿಹೇಳುವ ದೃಶ್ಯ ಸಾಮಾನ್ಯವಾಗಿತ್ತು.
ಅಂತ್ಯಕ್ರಿಯೆ ಶನಿವಾರ ಅವರ ಫಾರ್ಮ್ ಹೌಸ್‌ನಲ್ಲಿ ನಡೆಯಲಿದೆ. ಈ ಫಾರ್ಮ್ ಹೌಸ್ ಚೆನ್ನೈ ಹೊರವಲಯದಲ್ಲಿರುವ ರೆಡ್‌ಹಿಲ್ಸ್ ಬಳಿಯ ತಾಮರೈಪಾಕಂ ಎಂಬಲ್ಲಿ ಇದೆ. ನಾಳೆ ಬೆಳಗ್ಗೆ 11 ಗಂಟೆಗೆ ಅಂತಿಮ ವಿಧಿ-ವಿಧಾನಗಳು ನೆರವೇರಲಿವೆ.