ಕಾನೂನುರೀತ್ಯ ಜಾತಿ ಜನಗಣತಿಗೆ ಮರು ಸಮೀಕ್ಷೆ: ಡಿ.ಕೆ.ಶಿವಕುಮಾರ್ | Outdated report

dcm d.k.shivakumar
ಡಿಸಿಎಂ ಡಿ.ಕೆ.ಶಿವಕುಮಾರ್
Published on

ಬೆಂಗಳೂರು: ರಾಜಕೀಯ ಬಣ್ಣ ಬೇಡ, ಸಾಮಾಜಿಕ ನ್ಯಾಯಬೇಕು. ಯಾರು ಏನಾದರೂ ಹೇಳಲಿ. ಜನರು, ಶಾಸಕರ ಭಾವನೆ, ಅಭಿಪ್ರಾಯ ಅರಿತು, ಕಾನೂನು ರೀತ್ಯ ಜಾತಿ ಜನಗಣತಿಗೆ ಹೊಸದಾಗಿ ಸಮೀಕ್ಷೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಟ್ಟಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡರು.

ವಿಧಾನಸೌಧದಲ್ಲಿ ಗುರುವಾರ ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆಯ ಸೆಕ್ಷನ್ 11 (1)ರ ಪ್ರಕಾರ ಈಗಿನ ಜಾತಿ ಗಣತಿಗೆ 10 ವರ್ಷಗಳು ಮೇಲಾಗಿದ್ದು, ಬೇಕಾದಷ್ಟು ಜನರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಬಹುದು.

ಆಯೋಗದ ವರದಿ ಸ್ವೀಕರಿಸಿದ ನಂತರ ಸಚಿವ ಸಂಪುಟ ಸಭೆಯಲ್ಲಿ ಐದಾರು ಬಾರಿ ಚರ್ಚಿಸಿದ್ದು, ವಿರೋಧ ಪಕ್ಷದವರು ಸಹ ಮರು ಗಣತಿಗೆ ಒತ್ತಾಯಿಸಿದ್ದರು.

ಈ ಮಧ್ಯೆ ಪಕ್ಷದ ಹೈಕಮಾಂಡ್‌ನವರು ನಮ್ಮನ್ನು ಕರೆಯಿಸಿ ಈ ಬಗ್ಗೆ ಒಂದಷ್ಟು ಮಾರ್ಗದರ್ಶನ ಮಾಡಿದೆ. 10 ವರ್ಷಗಳು ಆಗಿರುವ ಕಾರಣಕ್ಕೆ ಎಲ್ಲ ಸಮಾಜದ ಎಲ್ಲರನ್ನು ಒಳಗೊಳ್ಳುವುದು ನಮ್ಮ ಉದ್ದೇಶ, ಇದು ಕಾಂಗ್ರೆಸ್ ಆಶಯವೆಂದು ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net