ಐಶ್ವರ್ಯಾಗೆ ಲೀಗಲ್ ನೋಟಿಸ್; 21,960 ರೂ. ಭೂಕಂದಾಯ ಪಾವತಿಸಲು ಸೂಚನೆ

aishwarya
Published on

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್​ಗೆ ಲೀಗಸ್ ನೋಟಿಸ್ ಜಾರಿ ಮಾಡಲಾಗಿದೆ. ಮುಂಬೈನಿಂದ ಸುಮಾರು 200 ಕಿಮೀ ದೂರದ ನಾಶಿಕ್​ನ ಸಿನ್ನಾರ್ ಪಟ್ಟಣದ ಅಡವಾಡಿ ಎಂಬಲ್ಲಿ ಐಶ್ವರ್ಯಾ ಒಂದು ಹೆಕ್ಟೇರು ಭೂಮಿ ಖರೀದಿಸಿದ್ದರು. 2022ರ ಸಾಲಿನ 21,960 ರೂ. ಭೂ ಕಂದಾಯ ಪಾವತಿಸದ ಕಾರಣ, ಸಿನ್ನಾರ್ ತಹಶೀಲ್ದಾರ್ ಕಚೇರಿಯಿಂದ ಅವರಿಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ.

ಈ ಹಿಂದೆಯೇ ಕೆಲವು ಬಾರಿ ಭೂ ಕಂದಾಯ ಪಾವತಿಸುವಂತೆ ಸೂಚನೆ ನೀಡಿದ್ದರೂ, ಅವರು ಗಮನ ಹರಿಸದ ಕಾರಣ ನೋಟಿಸ್ ನೀಡಲಾಗಿದೆಯಂತೆ. ಐಶ್ವರ್ಯಾ ರೈಗೆ ಮಾತ್ರವಲ್ಲದೇ ಅಲ್ಲಿ ನಿವೇಶನ ಮಾಲೀಕತ್ವ ಹೊಂದಿರುವ 1200 ಜನರಿಗೆ ಭೂ ಕಂದಾಯ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇದೇ ಮಾರ್ಚ್ ಅಂತ್ಯದ ಒಳಗೆ ಕಂದಾಯ ಪಾವತಿಸಲು ಸೂಚಿಸಲಾಗಿದೆ. ಆದರೆ, ಈ ಬಗ್ಗೆ ಐಶ್ವರ್ಯಾ ಪ್ರತಿಕ್ರಿಯೆ ನೀಡಿಲ್ಲ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net