ಬಣ್ಣದ ಫೋಟೋಸ್​, ಸರಣಿ​ ಸಂಖ್ಯೆ... ಚುನಾವಣಾ ಆಯೋಗದ ಹೊಸ ನಿಯಮಗಳು ಇಲ್ಲಿಂದಲೇ ಆರಂಭ | Election Commission

ವಿಜಯವಾಣಿ (90)
Published on

Election Commission: ಇವಿಎಂಗಳ ಕುರಿತು ಕೇಂದ್ರ ಚುನಾವಣಾ ಆಯೋಗವು ಪ್ರಮುಖ ನಿರ್ಧಾರವನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಇವಿಎಂಗಳಲ್ಲಿ ಅಭ್ಯರ್ಥಿಗಳ ಬಣ್ಣದ ಫೋಟೋಗಳು, ಸರಣಿ ಸಂಖ್ಯೆಗಳು ಗೋಚರಿಸುವಂತೆ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇದು ಬಿಹಾರದಿಂದಲೇ ಆರಂಭವಾಗಲಿದೆ ಎಂದು ಇಸಿ ಸ್ಪಷ್ಟಪಡಿಸಿರುವುದು ಗಮನಾರ್ಹ.

ಬಿಹಾರ ಚುನಾವಣೆಯಿಂದ ಈ ನಿಬಂಧನೆಯನ್ನು ಜಾರಿಗೆ ತರಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಮತದಾನದ ಸಮಯದಲ್ಲಿ ಇವಿಎಂಗಳಲ್ಲಿ ಅಭ್ಯರ್ಥಿಗಳ ಬಣ್ಣದ ಫೋಟೋಗಳನ್ನು ಚಿಹ್ನೆಗಳ ಜೊತೆಗೆ ಇರಿಸುವ ಮೂಲಕ, ಮತದಾರರು ತಮ್ಮ ಆದ್ಯತೆಯ ಅಭ್ಯರ್ಥಿಗಳನ್ನು ಇನ್ನಷ್ಟು ಸುಲಭವಾಗಿ ಆಯ್ಕೆ ಮಾಡಬಹುದು. ಇವಿಎಂ ಫಲಕದಲ್ಲಿ ಸಂಖ್ಯೆಯ ನಂತರ, ಅಭ್ಯರ್ಥಿಯ ಹೆಸರು, ಅವರ ಬಣ್ಣದ ಫೋಟೋ, ಚಿಹ್ನೆ ಇತ್ಯಾದಿಗಳನ್ನು ಈ ಕ್ರಮದಲ್ಲಿ ಪ್ರದರ್ಶಿಸಲಾಗುವುದು.

ವಿರೋಧ ಪಕ್ಷಗಳು ಬಿಹಾರ ಮತದಾರರ ಪಟ್ಟಿ ಮತ್ತು ಇವಿಎಂಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಬೆನ್ನಲ್ಲೇ ಈ ನಿರ್ಧಾರ ಮುನ್ನೆಲೆಗೆ ಬಂದಿವೆ. ಹೊಸ ಸುಧಾರಣೆಗಳ ಭಾಗವಾಗಿ, ಇವಿಎಂಗಳಲ್ಲಿ ಚಿಹ್ನೆಗಳ ಜೊತೆಗೆ ಅಭ್ಯರ್ಥಿಗಳ ಬಣ್ಣದ ಫೋಟೋಗಳನ್ನು ಮುದ್ರಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಇಲ್ಲಿಯವರೆಗೆ, ಮತದಾನದ ಸಮಯದಲ್ಲಿ ಅಭ್ಯರ್ಥಿಗಳ ಹೆಸರುಗಳು ಮತ್ತು ಅವರ ಚಿಹ್ನೆಗಳು ಮಾತ್ರ ಇವಿಎಂಗಳಲ್ಲಿದ್ದವು.

ಈ ಹಿಂದಿನವರೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಕೇವಲ ಪಕ್ಷದ ಚಿಹ್ನೆಗಳು ಮಾತ್ರ ಇದ್ದವು. ಆದರೆ, ಇನ್ನು ಮುಂದೆ, ಕೇಂದ್ರ ಚುನಾವಣಾ ಆಯೋಗವು ಇವಿಎಂಗಳಲ್ಲಿ ಅಭ್ಯರ್ಥಿಗಳ ಬಣ್ಣದ ಫೋಟೋಗಳನ್ನು ಪ್ರಕಟಿಸಲು ನಿರ್ಧರಿಸಿದೆ. ಇಲ್ಲಿಯವರೆಗೆ, ಮತದಾರರು ಚಿಹ್ನೆಯನ್ನು ನೋಡಿ ಮಾತ್ರ ಮತ ಚಲಾಯಿಸುತ್ತಿದ್ದರು. ಈಗ, ಇವಿಎಂಗಳಲ್ಲಿ ಅಭ್ಯರ್ಥಿಗಳ ಫೋಟೋಗಳನ್ನು ಲಭ್ಯವಾಗುವಂತೆ ಮಾಡುವುದರಿಂದ, ಮತಗಳು ಕಳೆದುಹೋಗುವ ಸಾಧ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮತದಾರರು ತಮ್ಮ ಅಭ್ಯರ್ಥಿಗೆ ಮತ ಹಾಕಿದ್ದಾರೋ ಇಲ್ಲವೋ ಎಂಬುದರ ಕುರಿತು ಅಲ್ಲಿಯೇ ಸ್ಪಷ್ಟತೆ ಪಡೆಯುತ್ತಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣಾ ಆಯೋಗವು, ಈ ನಿರ್ಧಾರವನ್ನು ಇದೀಗ ಜಾರಿಗೆ ತರಲು ಮುಂದಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net