ಕನ್ನಡದಲ್ಲೇ ಇಂಗ್ಲಿಷ್​ ಕಲಿಕೆ: ದೈನಂದಿನ ಬಳಕೆಯ ವಾಕ್ಯಗಳು

Sudina 6 English
Published on

ದೈನಂದಿನ ಬಳಕೆಯ ವಾಕ್ಯಗಳು

ಅವನೊಡನೆ ಮಾತನಾಡಿದರೆ ಬೇಜಾರು ಬರುತ್ತದೆ / ಅವನು ಬೇಜಾರು ತರಿಸುತ್ತಾನೆ.

He is a boring person.

ಚಹಾ ಅಥವಾ ಕಾಫಿ, ಏನನ್ನು ತೆಗೆದುಕೊಳ್ಳುವಿರಿ? ಯಾವುದೊ ಒಂದು. ಯಾವುದೂ ಆಗುತ್ತದೆ / ಪರವಾಗಿಲ್ಲ.

Would you have tea or coffee? Either one, I’m not bothered.

ಅವರ ಮನೆ ಈ ಓಣಿಯ ಇನ್ನೊಂದು ತುದಿಯಲ್ಲಿದೆ / ಕೊನೆಯಲ್ಲಿದೆ.

Their house is at the bottom of this lane.

ಕೆಳಗಡೆಯ ಮೆಟ್ಟಿಲಲ್ಲಿ ನಿಂತುಕೊಂಡು ಅವಳು ನನ್ನನ್ನು ಕೂಗಿ ಕರೆದಳು.

She called up to me standing at the bottom of the stairs.

ನೋಟಿನ ಅಮಾನ್ಯೀಕರಣ + ಜಿ.ಎಸ್.ಟಿ.ಯಿಂದಾದ ತೊಂದರೆ ಕಡಿಮೆಯಾಗಿ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ.

Problems caused by demonetization as well as GST is bottoming out slowly.

ಕುಂದಾಪುರದ ಜನರ ಔದಾರ್ಯ ಅತ್ಯಂತ ವಿಶೇಷವಾದುದು / ಅಪರಿಮಿತವಾದುದು.

Hospitality of people of Kundapur is boundless.

ಅವನು ಅವನ ಮೊಣಕಾಲ ಮೇಲೆ ಮಲಗಿಸಿ ಮಗುವನ್ನು ಮೇಲೆ, ಕೆಳಗೆ ಆಡಿಸಿದ.

He bounced the baby (lifted it up and down) on his knee.

ಆ ಗೂಳಿಯ ಬಗ್ಗೆ ಜಾಗರೂಕನಾಗಿರು. ಅದು ತುಂಬಾ ಜೋರಿನದು, ನಿನ್ನನ್ನು ಎಷ್ಟು ಹೊತ್ತಿಗೂ ಎತ್ತಿಹಾಕಬಹುದು.

Be careful with that bull. He’s very bouncy and may gore you at any time.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net