ಕನ್ನಡದಲ್ಲೇ ಇಂಗ್ಲಿಷ್​ ಕಲಿಕೆ: ದೈನಂದಿನ ಬಳಕೆಯ ವಾಕ್ಯಗಳು

Sudina 6 English
Published on

ದೈನಂದಿನ ಬಳಕೆಯ ವಾಕ್ಯಗಳು

ಈ ಗಡಚಿಕ್ಕುವ ಸಂಗೀತವನ್ನು ಅವರು ನಿಲ್ಲಿಸಿದ್ದರೆ ಒಳ್ಳೆಯದಿತ್ತು.

I wish they had turned down that blaring / blinking music.

ಈ ಯಾಂತ್ರಿಕ ಜೀವನದಿಂದ ರೋಸಿಹೋಗಿದೆ. ಒಂದು ತಣ್ಣಗಿರುವ, ನಾನಲ್ಲದೆ ಇನ್ನ್ಯಾರೂ ಇಲ್ಲದ ಕಡೆ ಇಡೀ ದಿನ ನದಿಯಲ್ಲಿದ್ದು ನೆಮ್ಮದಿಯಿಂದಿರಬೇಕೆಂದಿದ್ದೇನೆ.

I’m tired of this mechanical life. I wanna go to a cool place where there’s no-one but me and spend a whole day in a river and bliss out.

ಅವನ ವ್ಯವಹಾರ ಕೆಡುತ್ತಿತ್ತು ಆದರೆ ಸುಳ್ಳು ಪ್ರತಿಷ್ಠೆಗಾಗಿ ಆತ ಕುಟುಂಬದವರಿಗೆ ಏನೂ ಹೇಳದೆ ಕತ್ತಲೆಯಲ್ಲಿಟ್ಟಿದ್ದ.

His business soured, but just for false pride, he kept his family in blissful ignorance.

ನಿನ್ನೆ ಮಳೆ ಬಂದಿದ್ದರಿಂದ ಇಂದು ಸುಡುವಂತಹ ಬಿಸಿಲಿದೆ.

There is blistering heat outside as it rained yesterday.

ಸಿನಿಮಾ ಟಾಕೀಸಿನಲ್ಲಿ ನನ್ನ ಎದುರಿನ ಸಾಲಲ್ಲಿ ಕುಳಿತಿದ್ದ ಉದ್ದನೆಯ ವ್ಯಕ್ತಿಯೊಬ್ಬನಿಂದ ನನ್ನ ನೋಟಕ್ಕೆ ತಡೆ ಉಂಟಾಗಿತ್ತು.

A tall man sitting in my front row was blocking my view in the theater. / My view in the theatre was obscured by a tall man sitting in my front row.

ನನಗಿದು ನೈಜಸ್ಥಿತಿಯ ಬದಲು ಸ್ವಂತ ಅಭಿಪ್ರಾಯದ ಆಧಾರದಲ್ಲಿ ಹೇಳಿದ ಮಾತಿನಂತೆ ಕಾಣುತ್ತದೆ.

I think it is the biased statement and not the actual fact.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net