ಹಳ್ಳಿಮೇಷ್ಟ್ರು|ಕನ್ನಡದಲ್ಲೇ ಇಂಗ್ಲಿಷ್ ಕಲಿಕೆ ದೈನಂದಿನ ಬಳಕೆಯ ವಾಕ್ಯಗಳು

English vvani
Published on

ದೈನಂದಿನ ಬಳಕೆಯ ವಾಕ್ಯಗಳು

ತಂದೆ ಅವಳ ತಾಯಿಯನ್ನು ಬಿಟ್ಟು ಹೋಗಿದ್ದರಿಂದ ಅವಳದ್ದು ಯಾವುದೇ ಸವಲತ್ತುಗಳಿಲ್ಲದ ಸರಳ ಬಾಲ್ಯವಾಗಿತ್ತು.

As her father had left her mother, she had an austere childhood.

ಅವಳಿಗೆ ಅವನ ನಡವಳಿಕೆ ಇಷ್ಟವಾಗುವುದಿಲ್ಲ.

She doesn’t like his attitude.

ತಂದೆಯ ಬಗ್ಗೆ ನನಗಿರುವ ತಿರಸ್ಕಾರದಿಂದಾಗಿ ಅವರ ಶ್ರಾದ್ಧ ಮಾಡುವುದನ್ನೂ ತೀವ್ರವಾಗಿ ವಿರೋಧಿಸುತ್ತೇನೆ.

I have a deep aversion to performing anniversary of my father for my hatred for him.

ಒಮ್ಮಿಂದೊಮ್ಮೆಗೆ ಅವಳು ನನ್ನನ್ನು ನಗುವ ಕಣ್ಣುಗಳಿಂದ ಗಮನಿಸುತ್ತಿರುವುದು ನನ್ನ ಅರಿವಿಗೆ ಬಂತು.

I suddenly became aware of her looking at me with smiling eyes.

ಪರೀಕ್ಷೆಯ ಕೊನೆಯ ಘಂಟೆ ಬಾರಿಸಿದಾಗಲೂ ಒಬ್ಬ ಹುಡುಗ ಉತ್ತರ ಪತ್ರಿಕೆಯಲ್ಲಿ ಬರೆಯುತ್ತಲೇ ಇದ್ದ.

A boy was still writing away the answer sheet when the last bell rang.

ಅವಳು ಭಯ / ಆಶ್ಚರ್ಯಮಿಶ್ರಿತ ಗೌರವದೊಡನೆ ಮೈಸೂರಿನ ಅರಮನೆಯಲ್ಲಿರುವ ಸಿಂಹಾಸನ

ನೋಡುತ್ತ ನಿಂತಳು.

She stood watching in awe the throne in Mysore palace.

ಮಳೆಗಾಲ ಸಮೀಪಿಸುವಾಗ ಮೀನುಗಾರರು ತಮ್ಮ ದೋಣಿಗಳನ್ನು ತೀರದ ಮೇಲಕ್ಕೆ ಎಳೆತಂದು ಇಡುತ್ತಾರೆ.

When rainy season approaches, the fishermen beach their boats on the shore.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net