

-ವಿಜಯ್ ಸೇತುಪತಿ ಡೇಟ್ಸ್ ಗಾಗಿ ಕಾಯುತ್ತಿದೆ ಚಿತ್ರತಂಡ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರದ ಕಥೆಯ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ತೆರೆಗೆ ತರಲು ಲೀಡರ್ ರಾಮಯ್ಯ ಚಿತ್ರ ತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರದ ಕಥೆಯನ್ನು ಕಳೆದ ಏಳು ತಿಂಗಳಿನಿಂದ ಸಿದ್ದಪಡಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್ಗೆ 'ಲೀಡರ್ ರಾಮಯ್ಯ' ಎಂದು ಟೈಟಲ್ ಇಡಲಾಗಿದೆ. ಸಿ.ಎಂ ಸಿದ್ಧರಾಮಯ್ಯ ಬಯೋಪಿಕ್ಗೆ ಕಿಕ್ಸ್ಟಾರ್ಟ್ ಸಿಕ್ಕಿದ್ದು, ಸಿದ್ಧರಾಮಯ್ಯ ರೋಲ್ನಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮೂಡಿ ಬರ್ತಿರೋ ಜೀವನ ಚರಿತ್ರೆ ಸಿನಿಮಾವನ್ನು ಎರಡು ಭಾಗಗಳಲ್ಲಿ ತೆರೆ ಮೇಲೆ ತರಲು ಸಿದ್ಧತೆ ನಡೆಸಲಾಗಿದೆ. ಈ ಸಿನಿಮಾ ರಾಜ್ಯದ 24 ನೇ ಮುಖ್ಯಮಂತ್ರಿಯ ಸಿದ್ದರಾಮಯ್ಯ ಜೀವನದ ಸುತ್ತ ಈ ಕತೆ ಸುತ್ತುತ್ತದೆ.
ಇದನ್ನೂ ಓದಿ: ಮೊಬೈಲ್ ಚಾರ್ಜರ್ ಕೊಡಲಿಲ್ಲವೆಂದು ಪ್ರಾಣ ಬಿಟ್ಟ ಯುವಕ
ಸತ್ಯ ರತ್ನಂ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಶಶಾಂಕ್ ಶೇಷಗಿರಿ ಮ್ಯೂಸಿಕ್ ಕಂಪೋಸಿಂಗ್ ಚಿತ್ರಕ್ಕಿದೆ. ಹಯತ್ ಪೀರ ಮತ್ತು ಚನ್ನಪ್ಪ ಹಲಳ್ಳಿ ನಿರ್ಮಾಣದಲ್ಲಿ ಬರುತ್ತಿದೆ. ಆಗಸ್ಟ್ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕರು ಸಿದ್ಧತೆಯಲ್ಲಿದ್ದಾರೆ. ತಮಿಳು ನಟ ವಿಜಯ್ ಸೇತುಪತಿಯನ್ನು ಕರೆತರಲು ಬಹಳ ಉತ್ಸುಕರಾಗಿರುವ. ಈ ಚಿತ್ರ ತಂಡ ವಿಜಯ್ ಸೇತುಪತಿ ಕಾಲ್ ಶೀಟ್ಗಾಗಿ ಕಾಯುತ್ತಿದೆ ಎನ್ನಲಾಗಿದೆ.