ತಾಯಿಯ ಎರಡನೇ ಗಂಡನ ಆಸ್ತಿಯಲ್ಲಿ ಮೊದಲ ಗಂಡನ ಮಕ್ಕಳಿಗೆ ಪಾಲು ಇದೆಯೇ?

court
Published on

ಪ್ರಶ್ನೆ: ನಮ್ಮ ತಾಯಿಗೆ ಎರಡು ಮದುವೆ ಆಗಿರುತ್ತದೆ. ಮೊದಲನೆಯ ಗಂಡನಿಂದ ನಾವು ಇಬ್ಬರು ಗಂಡು ಮಕ್ಕಳು ಹುಟ್ಟಿದ್ದೇವೆ. ನಮ್ಮ ತಂದೆ ತೀರಿಕೊಂಡ ನಂತರ ತಾಯಿ ಇನ್ನೊಬ್ಬರನ್ನು ಮದುವೆಯಾದರು. ಎರಡನೆಯ ತಂದೆಯಿಂದ ನಮ್ಮ ತಾಯಿಗೆ ಎರಡು ಮಕ್ಕಳಾಗಿದ್ದಾರೆ. ನಮ್ಮ ಎರಡನೇ ತಂದೆಯೇ ನಮ್ಮೆಲ್ಲರನ್ನು ಸಾಕಿ ದೊಡ್ಡವರನ್ನಾಗಿ ಮಾಡಿದ್ದಾರೆ. ಈಗ ನಮ್ಮ ಎರಡನೇ ತಂದೆ ತೀರಿಕೊಂಡಿದ್ದಾರೆ. ನಮ್ಮ ಎರಡನೇ ತಂದೆಗೆ ತುಂಬಾ ಸ್ವಯಾರ್ಜಿತ ಆಸ್ತಿಗಳು ಇವೆ. ಈಗ ನಮ್ಮ ಎರಡನೇ ತಂದೆಯ ಮಕ್ಕಳು ನಮಗೆ ಏನೂ ಆಸ್ತಿ ಕೊಡುವುದಿಲ್ಲ ಎನ್ನುತ್ತಿದ್ದಾರೆ. ನಮಗೆ ನಮ್ಮ ಎರಡನೇ ತಂದೆಯ ಆಸ್ತಿಯಲ್ಲಿ ಭಾಗ ಬರುವುದಿಲ್ಲವೇ ದಯವಿಟ್ಟು ತಿಳಿಸಿ.

ವಕೀಲರ ಉತ್ತರ: ನಿಮ್ಮ ತಾಯಿಯ ಎರಡನೇ ಪತಿಯ ಆಸ್ತಿಯಲ್ಲಿ ನಿಮಗೆ ಯಾವ ಭಾಗವೂ ಸಿಗುವುದಿಲ್ಲ. ಆದರೆ ನಿಮ್ಮ ತಾಯಿಯ ಎರಡನೆಯ ಪತಿಯ ಆಸ್ತಿ ಸಮವಾಗಿ ಮೂರು ಭಾಗ ಆಗುತ್ತದೆ ಒಂದು ಭಾಗ ನಿಮ್ಮ ತಾಯಿಗೆ ಮತ್ತು ಇನ್ನು ಎರಡು ಭಾಗಗಳು ನಿಮ್ಮ ಎರಡನೇ ತಂದೆಯ ಎರಡು ಮಕ್ಕಳಿಗೆ ಸೇರುತ್ತದೆ. ನೀವು ನಿಮ್ಮ ತಾಯಿಯ ಮೊದಲನೆಯ ಪತಿಯ ಮಕ್ಕಳಾಗಿರುವುದರಿಂದ ನಿಮಗೆ ಆಸ್ತಿಯಲ್ಲಿ ಭಾಗ ಸಿಗುವುದಿಲ್ಲ.

ಎಸ್. ಸುಶೀಲಾ ಚಿಂತಾಮಣಿ ( ಎಸ್. ಸುಶೀಲ ಚಿಂತಾಮಣಿ, ಹೈಕೋರ್ಟ್​ನಲ್ಲಿ ಹಿರಿಯ ವಕೀಲರು ಇವರ ಇತ್ತೀಚಿನ ಇಂಗ್ಲೀಷ್ ಕಾದಂಬರಿ ‘ಐ ಆಂ ರಿಯಾನ್’, ತಂದೆ ತಾಯಿಯರ ಮನಸ್ತಾಪದಲ್ಲಿ ಮಕ್ಕಳಿಗಾಗುವ ನೋವಿನ ಬಗ್ಗೆ ಇದ್ದು ಇದನ್ನು ಅಮೆಝಾನ್ ಮೂಲಕ ಪಡೆಯಬಹುದು.)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net