ವಕೀಲ ವೃತ್ತಿ ಆತ್ಮಗೌರವವಾಗಿ ಲಾಭದಾಯಕವಾಗಿದೆ; ವೆಂಕಟಪ್ಪ

30-RNR-06
Published on

ರಾಣೆಬೆನ್ನೂರ: ವಕೀಲರ ಕಾರ್ಯ ಕ್ಷೇತ್ರ ಕೇವಲ ವೃತ್ತಿಗಾಗಿ ಅಲ್ಲ. ಇತ್ತೀಚಿನ ದಿನಗಳಲ್ಲಿ ಬಹುಮುಖ ಕಾರ್ಯ ಕ್ಷೇತ್ರಗಳಿಗೆ ವ್ಯಾಪಿಸಿದೆ. ಅಲ್ಲದೆ ಆತ್ಮ ಗೌರವ ಹಾಗೂ ಹೆಚ್ಚಿನ ಲಾಭದಾಯಕ ವೃತ್ತಿಯಾಗಿದೆ ಎಂದು ರಾಜ್ಯ ವಕೀಲರ ಪರಿಷತ್​ನ ನಿವೃತ್ತ ಚೇರ್ಮನ್​ ವೆಂಕಟಪ್ಪ ನಾಯಕ ಹೇಳಿದರು.

ನಗರದ ಪ್ರಶಾಂತಿ ಶಿಕ್ಷಣ ಸಂಸ್ಥೆಯ ಸಾವಕಾರ ಕಾನೂನು ಮಹಾವಿದ್ಯಾಲಯದ ವಿದ್ಯಾಥಿರ್ ಒಕ್ಕೂಟಗಳ ಕಾರ್ಯ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗದಗ ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್​ ರಾಜ್ಯ ವಿಶ್ವ ವಿದ್ಯಾಲಯದ ಪ್ರಭಾರ ಉಪ ಕುಲಪತಿ ಡಾ. ಸುರೇಶ ನಾಡಗೌಡರ ಮಾತನಾಡಿ, ವೃತ್ತಿ ಗೌರವಕ್ಕೆ ಮತ್ತು ವಕೀಲ ವೃತ್ತಿ ಅಪಾರ ಅವಕಾಶಗಳನ್ನು ಹೊಂದಿದೆ. ಎಲ್ಲ ಕ್ಷೇತ್ರಗಳಲ್ಲೂ ವಕೀಲರ ಸ್ಥಾನ ಮುಖ್ಯವಾಗಿದೆ. ಸಾಮಾಜಿಕ ಸಮನ್ವಯಕ್ಕೆ ವಕೀಲರ ಮಾರ್ಗದರ್ಶನ, ಆಳವಾದ ಅಧ್ಯಯನ, ಶ್ರದ್ದೆ ಮತ್ತು ಸಂಯಮ ಮುಖ್ಯ. ವಿದ್ಯಾಥಿರ್ಗಳು ನ್ಯಾಯಾಲಯ, ಸೆರೆಮನೆ ಮತ್ತು ವೃದ್ಧಾಶ್ರಮಗಳಿಗೆ ಭೇಟಿ ಮಾಡಿ ಮಾಹಿತಿ ಸಂಗ್ರಹ ಮಾಡಿಕೊಂಡು ಅಧ್ಯಯನ ಮಾಡಬೇಕು ಎಂದರು.

ಸಂಸ್ಥೆಯ ಅಧ್ಯೆ ರುಕ್ಮಿಣಿ ಸಾವಕಾರ ಅಧ್ಯಕ್ಷತೆ ವಹಿಸಿದ್ದರು.

ಪ್ರಾಚಾರ್ಯ ಎಸ್​.ಜಿ. ಪಾಟೀಲ, ಕಾರ್ಯದಶಿರ್ ಡಾ. ಮನೋಜ್​ ಸಾವಕಾರ, ಆಡಳಿತಾಧಿಕಾರಿ ಶಿಲ್ಪಾ ಸಾವಕಾರ, ಪ್ರಮುಖರಾದ ರಾಮದಾಸ, ಪಿ.ಆರ್​. ಹಿತ್ತಲಮನಿ, ಪಿ.ಜಿ. ಸೂರಣಗಿ, ಸದಾನಂದ ಕರೇಗೌಡರ, ಉಮೇಶ ಗೌಳಿ, ಡಾ ಬಿ.ಎಸ್​. ಹನಸಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net