ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ನಡೆದುಕೊಳ್ಳಿ; ಎಎಸ್ಪಿ

10-RNR-09
Published on

ರಾಣೆಬೆನ್ನೂರ: ಹಿಂದು ಮತ್ತು ಮುಸ್ಲಿಂ ಬಾಂಧವರು ಸೌಹಾರ್ದದಿಂದ ಮುಂಬರುವ ರಂಜಾನ್​ ಹಾಗೂ ಹೋಳಿ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸಬೇಕು. ಎಲ್ಲರೂ ಕಾನೂನು ಸುವ್ಯವಸ್ಥೆಗೆ ದಕ್ಕೆಬಾರದಂತೆ ನಡೆದುಕೊಳ್ಳಬೇಕು ಎಂದು ಜಿಲ್ಲಾ ಹೆಚ್ಚುವರಿ ಎಸ್ಪಿ ಲಕ್ಷ$್ಮ್ಮಣ ಶಿರಕೋಳ ಹೇಳಿದರು.

ನಗರದ ಶಹರ ಪೊಲೀಸ್​ ಠಾಣೆಯ ಸಭಾಂಗಣದಲ್ಲಿ ಸೋಮವಾರ ಸಂಜೆ ತಾಲೂಕು ಆಡಳಿತ ಹಾಗೂ ಪೊಲೀಸ್​ ಇಲಾಖೆಯ ಆಶ್ರಯದಲ್ಲಿ ಹೋಳಿ ಹಬ್ಬ ಮತ್ತು ರಂಜಾನ್​ ಹಬ್ಬದ ನಿಮಿತ್ತ ಏರ್ಪಡಿಸಿದ್ದ ಶಾಂತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿಗೆ ನಗರದಲ್ಲಿ ಹಲಗೆ ಬಾರಿಸುವ ವಿಚಾರವಾಗಿ ಎರಡು ಕೋಮಿನ ನಡುವೆ ಗಲಾಟೆಯಾಗಿದೆ. ಈ ರೀತಿಯಾಗದಂತೆ ನೋಡಿಕೊಳ್ಳುವುದು ಜನರ ಕರ್ತವ್ಯವಾಗಿದೆ. ನಗರದ ಮುಖಂಡರು ಜವಾಬ್ದಾರಿಯಿಂದ ನಡೆದುಕೊಂಡಾಗ ಮಾತ್ರ ಯಾವುದೆ ಅಹಿತಕರ ಘಟನೆ ನಡೆಯಲ್ಲ. ಎಲ್ಲ ಧರ್ಮದವರು ಅವರ ಸಾಂಪ್ರದಾಯಿಕ ಪದ್ದತಿಯಿಂದ ಹಬ್ಬಗಳನ್ನು ಆಚರಣೆ ಮಾಡಿಕೊಳ್ಳಬೇಕು. ಹೋಳಿ ಹಬ್ಬ ಭಕ್ತಿ ಭಾವದ ಹಬ್ಬವಾಗಿದ್ದು, ವಿಕಾರದಿಂದ ಕೂಡಿದ ಹಬ್ಬವಲ್ಲ. ಶ್ರದ್ಧೆ ಭಕ್ತಿಯಿಂದ ಹಬ್ಬ ಆಚರಿಸಬೇಕು. ಮಹಿಳೆಯರ, ಮಕ್ಕಳ ಸುರಕ್ಷಿತ ಬಗ್ಗೆ ಕಾಳಜಿ ಇರಲಿ, ನೈಸಗಿರ್ಕ ಬಣ್ಣ ಬಳಸಿ ಎಂದರು.

ನಗರಸಭೆ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಮಾತನಾಡಿ, ರಾಣೆಬೆನ್ನೂರ ನಗರ ಜೀವಂತ ಕಾಮರತಿಗೆ ಹೆಸರುವಾಸಿಯಾಗಿದೆ. ಮಾ. 15ರಂದು ಹೋಳಿ ಹಬ್ಬ ಆಚರಣೆ ಮಾಡಲು ತೀಮಾರ್ನಿಸಲಾಗಿದೆ. ಯಾವುದೆ ಹಬ್ಬಗಳ ಆಚರಣೆಗಳು ವಿಕೋಪಕ್ಕೆ ಹೋಗಬಾರದು. ಎಲ್ಲರೂ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡೋಣ ಎಂದರು.

ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ಆಯುಕ್ತ ಫಕ್ಕೀರಪ್ಪ ಇಂಗಳಗಿ, ಡಿವೈಎಸ್​ಪಿ ಡಾ. ಗಿರೀಶ ಭೋಜಣ್ಣವರ, ಸಿಪಿಐ ಡಾ. ಶಂಕರ ಎಸ್​.ಕೆ., ಪಿಎಸ್​ಐ ಗಡೆಪ್ಪ ಗುಂಜಟಗಿ, ನಗರಸಭೆ ಸದಸ್ಯರಾದ ಶೇಖಪ್ಪ ಹೊಸಗೌಡ್ರ, ಪುಟ್ಟಪ್ಪ ಮರಿಯಮ್ಮನವರ, ಮುಖಂಡರಾದ ಮೈಲಪ್ಪ ದಾಸಪ್ಪನವರ, ನಿತ್ಯಾನಂದ ಕುಂದಪುರ, ಮಲ್ಲಿಕಾರ್ಜುನ ಪೂಜಾರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net