ಆರಾಧನಾ ಮಹೋತ್ಸವಕ್ಕೆ ಚಾಲನೆ

10-AUG-GPT-1
ಗುಂಡ್ಲುಪೇಟೆ ಪಟ್ಟಣದ ಶ್ರೀ ರಾಘವೇಂದ್ರ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ಭಾನುವಾರ ಕು.ಯೋಗಶ್ರೀ ತಂಡ ದಾಸರವಾಣಿ ಪ್ರಸ್ತುತ ಪಡಿಸಿತು.
Published on

ಗುಂಡ್ಲುಪೇಟೆ: ಪಟ್ಟಣದ ಶ್ರೀ ರಾಘವೇಂದ್ರ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ಭಾನುವಾರ ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಪೂರ್ವಾರಾಧನೆ ಅಂಗವಾಗಿ ಬೆಳಗ್ಗೆ 6 ಗಂಟೆಯಿಂದ ಶ್ರೀ ಗಣಪತಿ ಪೂಜೆ, ಸಸ್ವಿಮಣ್ಯಾಹ, ಕಲಶ ಸ್ಥಾಪನೆ, ಗಣಹೋಮ, ಧನ್ವಂತರಿ ಹೋಮ ನಡೆಯಿತು. ನಂತರ ಸರಿಗಮಪ ಖ್ಯಾತಿಯ ಗಾಯಕಿ ಕು. ಯೋಗಶ್ರೀ ಅವರಿಂದ ದಾಸವಾಣಿ, ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ವಿದ್ವಾನ್ ಎ. ಡಿ.ಶ್ರೀನಿವಾಸನ್ ಹಾಗೂ ವಿದೂಷಿ ಇಂದ್ರಾಣಿ ಆನಂತರಾಮ್ ತಂಡದವರು ಸುಶ್ರಾವ್ಯವಾಗಿ ದೇವರನಾಮ ಹಾಡಿದರು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net