ಬೆಂಗಳೂರು: ಯಾವುದೇ ಒಂದು ಸಮುದಾಯವು ಸಂಘಟಿತವಾದಾಗ ಮಾತ್ರ ಸಾವಾಜಿಕ, ರಾಜಕೀಯ, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ದೇವರಾಜ ಅರಸು ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕರ್ನಾಟಕ ತಿಗಳ ಸಮುದಾಯಗಳ ಅಭಿವೃದ್ಧಿ ನಿಗಮದ ವೈಬ್‌ಸೈಟ್ ಉದ್ಘಾಟನೆ ಮತ್ತು ಯೋಜನೆಗಳ ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದುಳಿದ ಸಮುದಾಯಗಳ ಪ್ರಗತಿಗಾಗಿ ಪ್ರತ್ಯೇಕ ನಿಗಮಗಳನ್ನು ಸರ್ಕಾರ ಸ್ಥಾಪನೆ ಮಾಡಿದೆ. ಇದರಡಿ ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.
ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಡಿಯಲ್ಲಿದ್ದ ತಿಗಳ ಸಮುದಾಯವನ್ನು ಹಿಂದಿನ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ವಿಭಜಿಸಿ ಪ್ರತ್ಯೇಕ ತಿಗಳ ಸಮುದಾಯ ಅಭಿವೃದ್ಧಿ ನಿಗಮ ರಚನೆ ಮಾಡಲಾಯಿತು. ಒಟ್ಟಿಗೆ ಇದ್ದಾಗ 6 ಕೋಟಿ ರೂ. ಅನುದಾನ ಮೀಸಲಿರಿಸಿದ್ದು, ಪ್ರತ್ಯೇಕವಾದ ಮೇಲೆ ಅನುದಾನದ ಕೊರತೆ ಎದುರಾಗಿದೆ. ನಿಗಮದಿಂದ ನಿಯೋಗ ಬಂದರೆ ಸಿಎಂ ಭೇಟಿ ವಾಡಿಸಿ ಹೆಚ್ಚುವರಿ ಹಣ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಅನುದಾನ ಹೆಚ್ಚಳಕ್ಕೆ ಒತ್ತಾಯ:
ವಹ್ನಿಕುಲ ಸಮುದಾಯಕ್ಕೆ ಪ್ರತ್ಯೇಕ ನಿಗಮ ಬೇಕು ಎಂಬ ಬೇಡಿಕೆ ಬಂದಾಗ ಬಸವರಾಜ ಬೊವ್ಮಾಯಿ ಅವರು ೋಷಣೆ ಮಾಡಿದ್ದರು. ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಡಿ.ಕೆ. ಶಿವಕುವಾರ್ ನೋಂದಣಿ ವಾಡಿಸಿ ಅನುದಾನ ಮೀಸಲಿರಿಸಿದರು. ವೆಬ್‌ಸೈಟ್ ಬಗ್ಗೆ ವ್ಯಾಪಕ ಪ್ರಚಾರ ಮಾಡಿ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ತಲುಪುವಂತೆ ಮಾಡಬೇಕು. ಗಂಗಾ ಕಲ್ಯಾಣ, ವಿದೇಶಿ ಶೈಕ್ಷಣಿಕ ಅಭ್ಯಾಸ ಸೇರಿ ಇತರ ಸೌಲಭ್ಯಗಳಿಗೆ ಸರ್ಕಾರ ಕೊಡುತ್ತಿರುವ ಅನುದಾನದ ಸಾಲದು. ಈ ಮೊತ್ತ ಹೆಚ್ಚಿಸಬೇಕು ಎಂದು ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು ಹೇಳಿದರು.
ವಾಜಿ ಎಂಎಲ್ಸಿ ಪಿ.ಆರ್. ರಮೇಶ್, ಅರ್ಯ ವೈಶ್ಯ ಅಭಿವೃದ್ಧಿ ನಿಮಗದ ಅಧ್ಯಕ್ಷ ರಾಮಪ್ರಸಾದ್, ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿ ರಾವ್, ವಿಶ್ವಕರ್ಮ ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ. ಸುಜ್ಞಾನ ಮೂರ್ತಿ, ನಾರಾಯಣಸ್ವಾಮಿ, ಮುನಿರಾಜಪ್ಪ, ಎಸ್.ಕೆ. ಸಿದ್ದಯ್ಯ, ಎಜಿಎಂ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.