ರಾಜಕೀಯ ಪಕ್ಷಗಳಿಂದ ನಾಮಪತ್ರ ವಾಪಸ್‌ಗೆ ಕೊನೆಯ ಕ್ಷಣದ ಕಸರತ್ತು

k54g681_eci_625x300_27_October_23.jpg
Published on

ಬೆಂಗಳೂರು: ಲೋಕಸಭೆ ಚುನಾವಣೆಯ ನಾಮಪತ್ರ ಪರಿಶೀಲನೆ ಪೂರ್ಣಗೊಂಡಿದ್ದು, ಕೊನೆಯ ಕ್ಷಣದಲ್ಲಿ ಕಣದಿಂದ ಹಿಂದೆ ಸರಿಸುವ ಕಸರತ್ತು ನಡೆಯುತ್ತಿದೆ.

ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಅಡ್ಡಗಾಲಾಗುವವರನ್ನು ಗುರುತಿಸಿ ಅವರ ಮೇಲೆ ಒತ್ತಡ ತಂತ್ರ ಹೇರುತ್ತಿದ್ದಾರೆ.

ಜಾತಿ, ಅಧಿಕಾರಿ, ಹಣ ಮತ್ತಿತರ ಆಮಿಷ ಒಡ್ಡಿ ಅಭ್ಯರ್ಥಿಗಳನ್ನು ಉಮೇದುವಾರಿಕೆಯಿಂದ ಹಿಂದಕ್ಕೆ ಸರಿಸುವುದರ ಕಡೆಗೆ ರಾಜಕೀಯ ಪಕ್ಷಗಳು ಪ್ರಯತ್ನ ನಡೆಸಿವೆ.

ಅನೇಕ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಅಡ್ಡಗಾಲಾಗುವ ಅಭ್ಯರ್ಥಿಗಳ ಮನವೊಲಿಸುವ ಪ್ರಕ್ರಿಯೆ ಆರಂಭವಾಗಿದೆ. ತಮ್ಮ ತಮ್ಮ ಪಕ್ಷದ ಹೈಕಮಾಂಡ್ ಮೂಲಕ ಗೆಲುವಿಗೆ ಕಂಠಕಪ್ರಾಯರಾಗುವವರನ್ನು ಗುರುತಿಸಿ ವಾಪಸ್ ತೆಗೆಸುವ ಕೆಲಸಕ್ಕೆ ಕ್ಷಣ ಗಣನೆ ಆರಂಭವಾಗಿದೆ.

ಒಂದೇ ಹೆಸರಿನ ಇಬ್ಬರು, ಮೂವರು, ನಾಲ್ಕು ಜನ ಕಣದಲ್ಲಿರುವುದೂ ಕೂಡ ಕೆಲವು ಅಭ್ಯರ್ಥಿಗಳಿಗೆ ಮಗ್ಗಲು ಮುಳ್ಳಾಗಿದೆ. ತಮಗೆ ಬರಬೇಕಾದ ಮತಗಳು ಇನ್ನಾರ ಪಾಲಾಗುವ ಆತಂಕದಲ್ಲಿ ಅಂತಹವರನ್ನು ಕಣದಿಂದ ಹಿಂದೆ ಸರಿಸುವ ಪ್ರಯತ್ನಗಳೂ ನಡೆಯುತ್ತಿವೆ.

ಕೆಲವು ಕಡೆ ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಅವರನ್ನು ಆಯಾ ಪಕ್ಷಗಳು ಗಂಭೀರವಾಗಿ ಪರಿಗಣಿಸಿವೆ. ಕೆಲವು ಕಡೆ ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗಳು ಕೂಡ ಬಂಡಾಯ/ಸ್ವತಂತ್ರ್ಯ ಅಭ್ಯರ್ಥಿಗಳ ಸ್ಪರ್ಧೆಯಿಂದ ಆತಂಕಿತರಾಗಿದ್ದಾರೆ.

ನಗದು ಸೇರಿ 277 ಕೋಟಿ ಮೌಲ್ಯದ ವಸ್ತು ವಶ

ಚುನಾವಣಾ ಆಯೋಗದ ನಿರ್ದೇಶನದಂತೆ ಪೊಲೀಸ್, ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳ ಜತೆಗೆ ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಇಲಾಖೆಗಳು ಈವರೆಗೆ ನಗದು ಸೇರಿದಂತೆ 277,59,00,168 ವಸ್ತು ವಶಕ್ಕೆ ಪಡೆದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net