ಶಿಮ್ಲಾ ಹೆದ್ದಾರಿಯಲ್ಲಿ ಭೂಕುಸಿತ : ಸಿಲುಕಿಕೊಂಡಿರುವ ವಾಹನಗಳು

shimla
Published on

ಶಿಮ್ಲಾ : ಹಿಮಾಚಲ ಪ್ರದೇಶದ ಕಿನ್ನೌರ್​ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದು, ಒಂದು ಟ್ರಕ್​ ಮತ್ತು ಒಂದು ರಾಜ್ಯ ಸಾರಿಗೆ ಬಸ್​ ಮಣ್ಣಿನ ಕೆಳಗೆ ಸಿಕ್ಕಿಹಾಕಿಕೊಂಡಿವೆ ಎನ್ನಲಾಗಿದೆ. ಈ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 40 ಜನರು ಅಪಾಯದಲ್ಲಿದ್ದು, ಇಂಡೋ ಟಿಬೆಟಿಯನ್​ ಬಾರ್ಡರ್ ಪೊಲೀಸ್​(ಐಟಿಬಿಪಿ) ತಂಡದ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಕಿನ್ನೌರ್ ಜಿಲ್ಲೆಯ ರೆಕಾಂಗ್ ಪಿಯೋ-ಶಿಮ್ಲಾ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ. ಟ್ರಕ್, ಎಚ್​​ಆರ್​ಟಿಸಿ ಬಸ್ ಮತ್ತು ಇತರ ವಾಹನಗಳು ಅವಶೇಷಗಳ ಅಡಿಯಲ್ಲಿವೆ. ಅನೇಕ ಜನರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಐಟಿಬಿಪಿ, ಪೊಲೀಸ್​, ಹೋಂಗಾರ್ಡ್​ಗಳು ಮತ್ತು ರಕ್ಷಣಾ ತಂಡಗಳನ್ನು ಘಟನೆಯ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಕಿನ್ನೌರ್ ಎಸ್ಪಿ ಸಾಜು ರಾಮ ರಾಣ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net