

ಹೊಸನಗರ: ನಿರಂತರ ಮಳೆಯಿಂದಾಗಿ ಬಾಳೆಬರೆ (ಹುಲಿಕಲ್) ಘಾಟ್ ರಸ್ತೆಯಲ್ಲಿ ಭಾನುವಾರ ರಸ್ತೆಗೆ ಗುಡ್ಡದ ಮಣ್ಣು ಜರಿದು ರಸ್ತೆ ಬಂದ್ ಆಗಿದೆ. ಬಾಳೆಬರೆ ಾಲ್ಸ್ ಸಮೀಪ ಈ ಘಟನೆ ನೆಡೆದಿದ್ದು, ರಸ್ತೆ ಮೇಲೆ ಮಣ್ಣು ಕುಸಿದಿದೆ. ಸಂಚಾರ ಬಂದ್ ಆಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಈಗಾಗಲೇ ಕುಸಿದ ಧರೆ ಜಾಗದಲ್ಲಿ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ವಾಹನಗಳು ಕೊಲ್ಲೂರು ಘಾಟ್ ಇಲ್ಲವೇ, ಆಗುಂಬೆ ಘಾಟ್ ಮಾರ್ಗದ ಮೂಲಕ ಸಂಚರಿಸಬೇಕಿದೆ.