ಮಣ್ಣು ಕುಸಿದು ತೋಟಕ್ಕೆ ಹಾನಿ

rain effect (1)
ಹಳ್ಳದ ರಭಸಕ್ಕೆ ಧರೆ ಕುಸಿದು ಬಿದ್ದಿರುವ ಅಡಕೆ ಮರಗಳು.
Published on

ತೀರ್ಥಹಳ್ಳಿ: ತಾಲೂಕಿನ ತೂದೂರು ಗ್ರಾಪಂನ ಮೂಡ್ಲು ಗ್ರಾಮದಲ್ಲಿ ಹಳ್ಳದ ಬದಿ ಕುಸಿದು ಫಸಲಿಗೆ ಬಂದ 30 ಅಧಿಕ ಅಡಕೆ ಮರಗಳು ನೀರಲ್ಲಿ ಕೊಚ್ಚಿಹೋಗಿವೆ. ಮೂಡ್ಲು ಗ್ರಾಮದ ಮಂಜುನಾಥ್ ಶೆಟ್ಟಿ ಎಂಬುವರ ತೋಟದ ಹಿಂಭಾಗ ಹಳ್ಳ ಮೃಗಶಿರಾ ಮಳೆ ಅಬ್ಬರದಿಂದ ಮೈದುಂಬಿ ಹರಿಯುತ್ತಿದೆ. ಇದರಿಂದ ಹಳ್ಳದ ಬದಿ ಭಾರಿ ಪ್ರಮಾಣದಲ್ಲಿ ಕುಸಿದು ಅಡಿಕೆ ಮರಗಳು ನೆಲಕ್ಕೆ ಉರುಳಿವೆ. ಪ್ರತಿ ವರ್ಷದ ಮಳೆಗಾಲದಲ್ಲೂ ಈ ಭಾಗದಲ್ಲಿ ಧರೆ ಕುಸಿಯುತ್ತಿದೆ. ಆದರೆ ಈ ಬಗ್ಗೆ ಸಂಬಂಧಿಸಿದವರು ಗಮನ ಹರಿಸುತ್ತಿಲ್ಲ. ಸ್ಥಳಕ್ಕೆ ಗ್ರಾಪಂ ಆಡಳಿತ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net