

ಮಿನ್ನೆಸೊಟ: ಹೆದ್ದಾರಿಯಲ್ಲಿ ವಿಮಾನ ಸಾಗುವುದನ್ನು ಕಲ್ಪಿಸಿಕೊಂಡರೂ ಅದೊಂದು ಹುಚ್ಚು ಎನಿಸಿಕೊಳ್ಳಬಹುದು. ಆದರೆ ಇಲ್ಲೊಬ್ಬ ಪೈಲಟ್ ಹೆದ್ದಾರಿ ಮೇಲೇ ವಿಮಾನವನ್ನು ಲ್ಯಾಂಡಿಂಗ್ ಮಾಡಿ ಎಲ್ಲರೂ ಹುಬ್ಬೇರಿಸಿ ನೋಡುವಂತೆ ಮಾಡಿದ್ದಾನೆ.
ಅಮೆರಿಕದ ಮಿನ್ನೆಸೊಟದಲ್ಲಿನ ಸೈಂಟ್ ಪಾಲ್ ಸಬರ್ಬ್ ಆಫ್ ಆರ್ಡನ್ ಹಿಲ್ಸ್ನಲ್ಲಿ ಬುಧವಾರ ರಾತ್ರಿ ಇಂಥದ್ದೊಂದು ವಿಚಿತ್ರ ಪ್ರಸಂಗ ಜರುಗಿದೆ. ಚಾಂಪಿಯನ್ ಎನಿಸಿಕೊಂಡಿರುವ ಪೈಲಟ್, 52 ವರ್ಷದ ಕ್ರೆಗ್ ಗಿಫಾರ್ಡ್ ಅವರು ಸಿಂಗಲ್ ಎಂಜಿನ್ನ ಬೆಲಾಂಕ ವಿಕಿಂಗ್ ಪ್ರೇನ್ಅನ್ನು ಹೀಗೆ ಹೆದ್ದಾರಿ ಮೇಲೆ ಲ್ಯಾಂಡಿಂಗ್ ಮಾಡಿದ್ದು, ಈ ವೇಳೆ ವಾಹನವೊಂದಕ್ಕೆ ಇದು ಡಿಕ್ಕಿ ಕೂಡ ಆಗಿದೆ. ವಿಮಾನದಲ್ಲಿ ಇಬ್ಬರಿದ್ದು ಯಾರಿಗೂ ಗಾಯವಾಗಿಲ್ಲ.
ಗಿಫಾರ್ಡ್ ಅವರು ಅನ್ಲಿಮಿಟೆಡ್ ಏರೋಬಿಕ್ ಟೀಮ್ನಲ್ಲಿದ್ದು 2017 ಮತ್ತು 2019ರಲ್ಲಿ ಯುನೈಟೆಡ್ ಸ್ಟೇಟ್ಸ್ ಇಂಟರ್ನ್ಯಾಷನಲ್ ಕಾಂಪಿಟಿಷನ್ನಲ್ಲಿ ಸ್ಪರ್ಧಿಸಿದ್ದರು. 2017ರಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆದ ವರ್ಲ್ಡ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕವನ್ನೂ ಗೆದ್ದಿದ್ದರು. ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಗಿಫಾರ್ಡ್ ವಿಮಾನವನ್ನು ನಿಭಾಯಿಸಿದ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮತ್ತು ನ್ಯಾಷನಲ್ ಟ್ರಾನ್ಸ್ಪೋರ್ಟೇಷನ್ ಆ್ಯಂಡ್ ಸೇಫ್ಟಿ ಬೋರ್ಡ್ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ಗಿಫಾರ್ಡ್ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. (ಏಜೆನ್ಸೀಸ್)